ಪರಪುರುಷನೊಂದಿಗೆ ಬಂದಿದ್ದ ಮಹಿಳೆ ತನ್ನ ಹೆಂಡ್ತಿಯೆಂದು ತಿಳಿದ ಇಬ್ಬರು ಹೋಟೆಲ್ ನಲ್ಲಿ ಗಲಾಟೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರಿಗೆ ಅಚ್ಚರಿಯ ಜೊತೆಗೆ ವಿನೋದವನ್ನೂ ನೀಡಿದೆ. ವಿಡಿಯೋ ಹೋಟೆಲ್ ಗೆ ಬಂದ ಎರಡು ಜೋಡಿಗಳ ನಡುವೆ ನಾಟಕೀಯ ನಡೆ ತೋರಿಸಿದೆ.
ವೀಡಿಯೊದಲ್ಲಿ ಎರಡು ಜೋಡಿ ಹೋಟೆಲ್‌ಗೆ ಭೇಟಿ ನೀಡಿದ್ದು ಪರಸ್ಪರ ಅಕ್ಕಪಕ್ಕದ ಕೊಠಡಿಗಳನ್ನು ಪಡೆದಿದ್ದಾರೆ. ಮೊದಲ ಜೋಡಿ ಬೇಗನೆ ಬಂದಿದ್ದು ತಮ್ಮ ಚಪ್ಪಲಿಗಳನ್ನು ಬಾಗಿಲಿನ ಹೊರಗೆ ಇರಿಸಿದ್ದರು.
ಎರಡನೇ ಜೋಡಿ ಬಂದಾಗ, ಪಕ್ಕದ ಕೋಣೆಯ ಹೊರಗೆ ಇದ್ದ ಚಪ್ಪಲಿಗಳು ತನಗೆ ಪರಿಚಿತವಿರುವಂತೆ ಇವೆ ಎಂದು ಚಪ್ಪಲಿಗಳನ್ನು ಗಮನಿಸಿದಾಗ ಅನುಮಾನ ಬಂತು. ಆಗ ಪುರುಷ ಬಾಗಿಲು ತಟ್ಟಿದಾಗ ವ್ಯಕ್ತಿಯೋರ್ವ ಬಾಗಿಲು ತೆರೆದಿದ್ದು, ಇದು ಅನುಮಾನಗಳನ್ನು ಹೆಚ್ಚಿಸಿದಾಗ ವ್ಯಕ್ತಿಯ ಜೊತೆ ಇದ್ದ ಮಹಿಳೆ ತನ್ನ ಪತ್ನಿಯೆಂದು ತಿಳಿದಾಗ ಗಲಾಟೆ ಜೋರಾಯಿತು.
ಈ ಗಲಾಟೆ ಕೇಳಿ ಎರಡನೇ ವ್ಯಕ್ತಿಯ ಜೊತೆ ಬಂದಿದ್ದ ಮಹಿಳೆ ಹೊರಗೆ ಬಂದಾಗ ಆಕೆ ತನ್ನ ಪತ್ನಿಯೆಂಬುದು ಮೊದಲನೇ ಜೋಡಿಯ ಪುರುಷನಿಗೆ ತಿಳಿದಾಗ ಗಲಾಟೆ ಮತ್ತೊಂದು ರೂಪ ಪಡೆಯಿತು. ಇಬ್ಬರೂ ಪುರುಷರು ಪರಸ್ಪರ ಹೆಂಡತಿಯರೊಂದಿಗೆ ಹೋಟೆಲ್‌ಗೆ ಬಂದಿದ್ದಾರೆ ಎಂಬುದು ಬಹಿರಂಗವಾಯಿತು.