ಚಿತ್ರದುರ್ಗ: ಕಾನೆಹಳ್ಳದಲ್ಲಿ ಕುರಿ ತೊಳೆಯಲು ಹೋಗಿದ್ದ ದಂಪತಿ ನೀರು ಪಾಲಾದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಅತ್ತಿಮಗ್ಗೆ ಗ್ರಾಮದ ಬಳಿ ನಡೆದಿದೆ.
ಅತ್ತಿಮಗ್ಗೆ ಗ್ರಾಮದ ತಿಮ್ಮಯ್ಯ(35), ಪುಟ್ಟಮ್ಮ(32) ನೀರು ಪಾಲಾದವರು ಎಂದು ಗುರುತಿಸಲಾಗಿದೆ. ಪತ್ನಿ ಪುಟ್ಟಮ್ಮ ಶವ ಪತ್ತೆಯಾಗಿದ್ದು, ಪತಿ ತಿಮ್ಮಯ್ಯ ಶವಕ್ಕಾಗಿ ಹುಡುಕಾಟ ನಡೆಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ತಿಮ್ಮಯ್ಯನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.