ಶ್ರಾವಣ ಮಾಸದಲ್ಲಿ ಹಬ್ಬಗಳ ಸಂಭ್ರಮ ಹೆಚ್ಚಿಸಲು ಮಾಡಿ ಸವಿಯಿರಿ ‘ಗೆಣಸಿನ ಹೋಳಿಗೆ’

ಶ್ರಾವಣ ಮಾಸದ ಜೊತೆಗೆ ಹಬ್ಬಗಳ ಸಾಲೇ ಬರುತ್ತದೆ. ಒಂದೆರಡು ಸಿಹಿ ತಿನಿಸು ಮಾಡಿದರೆ ಹಬ್ಬದ ಅಂದ ಹೆಚ್ಚೋದಿಲ್ಲ. ಹಾಗಂತ ಅಂಗಡಿಯಿಂದ ಸ್ವೀಟ್ ತಂದು ಹಬ್ಬ ಆಚರಿಸೋಕೆ ಈ ಸಂದರ್ಭದಲ್ಲಿ ಮನಸ್ಸು ಒಪ್ಪೋದಿಲ್ಲ. ಇಂತಹ ವೇಳೆಯಲ್ಲಿ ಮನೆಯಲ್ಲೇ ಒಂದು ಹೊಸ ರುಚಿ ಟ್ರೈ ಮಾಡಬಹುದು. ಅದುವೇ ಗೆಣಸಿನ ಹೋಳಿಗೆ.

ಬೇಕಾಗುವ ಸಾಮಾಗ್ರಿ : ಅರ್ಧ ಕೆಜಿ ಹುಳುಕಿಲ್ಲದ ಗೆಣಸು, 1 ಕಿಲೋ ತೊಗರಿಬೇಳೆ, 750 ಗ್ರಾಂ ಬೆಲ್ಲ, ಅರ್ಧ ಕಿಲೋ ಮೈದಾ ಹಿಟ್ಟು, ಸ್ವಲ್ಪ ಎಣ್ಣೆ, ಒಂದು ಸ್ಪೂನ್ ಅರಿಸಿನ ಮತ್ತು ಸ್ವಾದ ಹೆಚ್ಚಿಸಲು ಚೂರು ಶುಂಠಿ.

ಮಾಡುವ ವಿಧಾನ : ಮೈದಾಹಿಟ್ಟಿಗೆ ಒಂದು ಸ್ಪೂನ್ ಅರಿಶಿಣ ಸೇರಿಸಿ, ಎಣ್ಣೆ ಹಾಕಿ ಕಣಕದ ಹದಕ್ಕೆ ಕಲಸಿಟ್ಟುಕೊಳ್ಳಿ. ಗೆಣಸು ತೊಳೆದು ಬೇಯಿಸಿ, ಸಿಪ್ಪೆ ತೆಗೆದುಕೊಳ್ಳಿ. ಬಳಿಕ ಬೇಳೆಯನ್ನು ಮೆದುವಾಗಿ ಬೇಯಿಸಿ, ನೀರು ತೆಗೆದು ಬೇಳೆಗೆ ಬೆಲ್ಲ ಹಾಕಿ ಸ್ವಲ್ಪ ಹೊತ್ತು ಕುದಿಸಿ.

ಬಳಿಕ ಬೆಂದ ಬೇಳೆ, ಗೆಣಸು, ಚೂರು ಜಜ್ಜಿದ ಶುಂಠಿ ಜೊತೆ ನುಣ್ಣಗೆ ಉಂಡೆ ಕಟ್ಟಲು ಬರುವಷ್ಟು ಗಟ್ಟಿಯಾಗಿ ರುಬ್ಬಿಕೊಳ್ಳಿ. ಈ ಹೂರಣವನ್ನು ಲಿಂಬು ಗಾತ್ರ ಮಾಡಿಕೊಂಡು ಕಣಕದಲ್ಲಿ ತುಂಬಿ ಬಾಳೆ ಎಲೆಯ ಮೇಲಿಟ್ಟು ಎಣ್ಣೆ ಹಾಕಿ ನಿಧಾನಕ್ಕೆ ಲಟ್ಟಿಸಿ ತವದ ಮೇಲೆ ಚಿಕ್ಕ ಉರಿಯಲ್ಲಿ ಬೇಯಿಸಿ. ಇದನ್ನು ಹಾಲು ಅಥವಾ ತುಪ್ಪದೊಂದಿಗೆ ಸವಿಯಬಹುದು. ಶುಂಠಿ ಹಾಕಿರೋದರಿಂದ ಬೇಳೆಯ ವಾಯು ಪ್ರಕೃತಿಯನ್ನು ನಿಯಂತ್ರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read