ಕದ್ದ ಹಣವನ್ನ ಮರುದಿನವೇ ವಾಪಾಸ್ ಮಾಡಿದ ಕಳ್ಳರು; ಇದರ ಹಿಂದಿನ ಕಾರಣ ತಿಳಿದ ಪೊಲೀಸರಿಗೆ ಅಚ್ಚರಿ…!

ಕದ್ದ ಹಣವನ್ನು ಮರುದಿನವೇ ಕಳ್ಳರು ಮಾಲೀಕರಿಗೆ ಹಿಂದಿರುಗಿಸಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಬಿಲ್ಹಾ ಪ್ರದೇಶದಲ್ಲಿ ವರದಿಯಾಗಿದೆ. ಈ ಘಟನೆ ಮಾಲೀಕರಿಗಷ್ಟೇ ಅಲ್ಲದೇ ಪೊಲೀಸರಿಗೂ ಅಚ್ಚರಿಯುಂಟು ಮಾಡಿದೆ.

ಶೋಭರಾಮ್ ಕೋಶಾಲೆ ಎಂಬುವವರು ತಮ್ಮ ಗ್ರಾಮದ ಜಮೀನನ್ನು ಮಾರಾಟ ಮಾಡಿ ನಗದು ರೂಪದಲ್ಲಿ ಬಂದಿದ್ದ 95 ಸಾವಿರ ರೂಪಾಯಿ ಹಣವನ್ನ ತಮ್ಮ ಮನೆಯ ನೆಲಮಾಳಿಗೆಯಲ್ಲಿ ಇಟ್ಟಿದ್ದರು.

ಮರುದಿನ ಶೋಭರಾಮ್ ನೆಲಮಾಳಿಗೆಯನ್ನು ಪರಿಶೀಲಿಸಿದಾಗ ಸಂಪೂರ್ಣ ಹಣ ನಾಪತ್ತೆಯಾಗಿತ್ತು. ನಗದನ್ನು ಯಾರೋ ಕದ್ದಿದ್ದರು. ಘಟನೆಯಿಂದ ಆಘಾತಕ್ಕೊಳಗಾದ ನಂತರ ಅವರು ಏಪ್ರಿಲ್ 1 ರಂದು ಬಿಲ್ಹಾ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಬಗ್ಗೆ ದೂರು ನೀಡಿದ್ದರು.

ಪೊಲೀಸರು ಕಳ್ಳರನ್ನು ಹುಡುಕಲು ಪ್ರಾರಂಭಿಸಿದಾಗ ನಾಪತ್ತೆಯಾಗಿದ್ದ ಹಣ ಶೋಭರಾಮ್ ಅವರು ಇಟ್ಟಿದ್ದ ಜಾಗದಲ್ಲೇ ಪತ್ತೆಯಾಗಿತ್ತು. ಕದ್ದಿದ್ದ 95 ಸಾವಿರ ಹಣವನ್ನು ಕಳ್ಳರು ಹಿಂದಿರುಗಿಸಿದ್ದಾರೆ. ಇದು ಪೊಲೀಸರಿಗೆ ಹಾಗೂ ಮಾಲೀಕರಿಗೆ ಅಚ್ಚರಿ ಮೂಡಿಸಿದೆ.

ಹಣ ಕದ್ದ ಕಳ್ಳರು ಸಿಕ್ಕಿಬೀಳುತ್ತೇವೆಂದು ಭಯದಲ್ಲಿ ಹಣ ವಾಪಸ್ ನೀಡಿದ್ದಾರೆ ಎಂದು ನಂಬಲಾಗಿದೆ. ಆದರೆ ಪೊಲೀಸರು ಶೋಧಕಾರ್ಯ ಮುಂದುವರಿಸಲು ನಿರ್ಧರಿಸಿದ್ದು ಕಳ್ಳತನ ಮಾಡಿದ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read