ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವತಃ ಕೈಬರಹದಲ್ಲೇ 100 ಪುಟಗಳ ಬಜೆಟ್ ಪ್ರತಿ ಬರೆದು ಮಂಡಿಸಿದ ಸಚಿವ ಚೌಧರಿ

ರಾಯಪುರ: ಛತ್ತೀಸ್ ಗಢದ ಹಣಕಾಸು ಸಚಿವ ಒ.ಪಿ. ಚೌಧರಿ ಕೈಬರಹದಲ್ಲೇ ಸಿದ್ಧಪಡಿಸಿದ ಬಜೆಟ್ ಮಂಡಿಸಿ ಇತಿಹಾಸ ನಿರ್ಮಿಸಿದ್ದಾರೆ.

ಕಂಪ್ಯೂಟರ್ ಮುದ್ರಿತ ಬಜೆಟ್ ಪ್ರತಿ ಮಂಡಿಸುವ ಈಗಿನ ಕಾಲದಲ್ಲಿ ಸ್ವತಃ ಹಣಕಾಸು ಸಚಿವರೇ ಕೈಬರಹದಲ್ಲಿ ಸಿದ್ಧಪಡಿಸಿದ 100 ಪುಟಗಳ ಬಜೆಟ್ ಪ್ರತಿ ಮಂಡಿಸಿದ್ದಾರೆ. ಬರವಣಿಗೆಯ ಮೂಲ ಸಂಪ್ರದಾಯ ಪಾಲಿಸಿ ಸ್ವಂತಿಕೆಗೆ ಉತ್ತೇಜನ ನೀಡಲಾಗಿದೆ. ಡಿಜಿಟಲ್ ಯುಗದಲ್ಲಿ ಕೈ ಬರಹದ ಬಜೆಟ್ ಪ್ರತಿ ಮಂಡಿಸುವುದು ಮಹತ್ವ ಪಡೆದಿದೆ. ಇದು ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ಉತ್ತೇಜಿಸುತ್ತದೆ ಎಂದು ಐಎಎಸ್ ಮಾಜಿ ಅಧಿಕಾರಿಯೂ ಆಗಿರುವ ಒ.ಪಿ. ಚೌಧರಿ ತಿಳಿಸಿದ್ದಾರೆ.

ಬಜೆಟ್ ಪ್ರತಿ ಸರ್ಕಾರದ ಅಧಿಕೃತ ದಾಖಲೆಯಾಗಿದೆ. ಒಂದು ಪದ ಅಥವಾ ಸಾಲು ತಪ್ಪಾಗಿದ್ದರೂ ಸ್ಪಷ್ಟತೆಗಾಗಿ ಚೌಧರಿ ಅದನ್ನು ಸಂಪೂರ್ಣ ಹೊಸದಾಗಿ ಬರೆಯುತ್ತಿದ್ದರು. ಬಜೆಟ್ ಪ್ರತಿ ಪೂರ್ಣಗೊಳಿಸಲು ಮೂರು ರಾತ್ರಿ ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ.

ಈಗಿನ ಡಿಜಿಟಲ್ ಯುಗದಲ್ಲಿಯೂ ಕೈಬರಹದಲ್ಲಿಯೇ ಬಜೆಟ್ ಪ್ರತಿ ಬರೆದ ಒ.ಪಿ. ಚೌಧರಿ ಇತಿಹಾಸ ನಿರ್ಮಿಸಿದ್ದಾರೆ. ಛತ್ತೀಸ್ ಗಢದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ಪುಟಗಳ ಬಜೆಟ್ ನ್ನು ಸ್ವತಃ ಹಣಕಾಸು ಸಚಿವರು ಕೈಯಿಂದ ಬರೆದು ಅದನ್ನು ವಿಧಾನಸಭೆಯಲ್ಲಿ ಓದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read