ಪಡಿತರ ವಿತರಣಾ ಕೇಂದ್ರಗಳಲ್ಲಿ ಪಡಿತರ ಸೋರಿಕೆ ತಡೆಯಲು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ತೂಕದ ಯಂತ್ರವನ್ನು ಬಯೋಮೆಟ್ರಿಕ್ ಗೆ ಸಂಯೋಜಿಸಲು ಆಹಾರ ಇಲಾಖೆ ಕ್ರಮ ಕೈಗೊಂಡಿದೆ.
ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ಸ್ ಎಂಬ ಮೊಬೈಲ್ ಅಪ್ಲಿಕೇಶನ್ ವ್ಯವಸ್ಥೆಯನ್ನು ಪರಿಚಯಿಸಲು ಆಹಾರ ಇಲಾಖೆ ಕ್ರಮ ಕೈಗೊಂಡಿದೆ. ಗ್ರಾಹಕರಿಗೆ ಪಡಿತರ ವಿತರಿಸುವಾಗ ತೂಕದಲ್ಲಿ ಮೋಸವಾಗುವುದನ್ನು ತಡೆಯಲು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ತೂಕದ ಯಂತ್ರವನ್ನು ಬಯೋಮೆಟ್ರಿಕ್ ಗೆ ಸಂಯೋಜನೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ತೂಕದಲ್ಲಿ ವ್ಯತ್ಯಾಸವಾದರೆ ಗ್ರಾಹಕರಿಗೆ ಗೊತ್ತಾಗುತ್ತದೆ.
ಸರ್ಕಾರದ ಕೇಂದ್ರೀಕೃತ ದತ್ತಾಂಶದೊಂದಿಗೆ ಮೊಬೈಲ್ ಅಪ್ಲಿಕೇಶನ್ ಸಂಪರ್ಕ ಹೊಂದಿದ್ದು, ಈ ಕೇಂದ್ರೀಕೃತ ವ್ಯವಸ್ಥೆಯಿಂದ ಫಲಾನುಭವಿಗಳು ಯಾವುದೇ ಪ್ರದೇಶದಲ್ಲಿ ಪಡಿತರ ಪಡೆಯುವುದನ್ನು ಖಚಿತಪಡಿಸುತ್ತದೆ.
ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ನ್ಯಾಯಬೆಲೆ ಅಂಗಡಿ ಮೂಲಕ ಉಚಿತವಾಗಿ ಅಕ್ಕಿ, ಜೋಳ, ರಾಗಿ ನೀಡಲಾಗುತ್ತಿದ್ದು ರಾಜ್ಯದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅನುಕೂಲವಾಗುವಂತೆ ಹೊಸ ಮೊಬೈಲ್ ಅಪ್ಲಿಕೇಶನ್ ಪರಿಚಯಿಸಲು ಆಹಾರ ಇಲಾಖೆ ಕ್ರಮ ಕೈಗೊಂಡಿದೆ. ಈ ಮೊಬೈಲ್ ಆ್ಯಪ್ ನಲ್ಲಿ ಆಧಾರ್ ಸಂಬಂಧಿಸಿದ ಬಯೋಮೆಟ್ರಿಕ್, ಸ್ಕ್ಯಾನಿಂಗ್, ಜಿಪಿಎಸ್ ನಂತಹ ಟ್ರ್ಯಾಕಿಂಗ್ ಸೌಲಭ್ಯಗಳಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುವ ಪ್ರತಿ ವಸ್ತುವನ್ನು ಆಪ್ ಮೂಲಕ ವರದಿ ಮಾಡಲಾಗುವುದು ಎನ್ನಲಾಗಿದೆ.
