ಬೆಂಗಳೂರು: ರಾಜ್ಯದಲ್ಲಿ 1 ರಿಂದ 10ನೇ ತರಗತಿ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ವಿಧಾನ ಪರಿಷತ್ ನಲ್ಲಿ ಸದಸ್ಯರು ವಿಶೇಷ ಚರ್ಚೆಯಲ್ಲಿ ಪ್ರಸ್ತಾಪಿಸಲಾದ ವಿಷಯಗಳಿಗನುಗುಣವಾಗಿ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸುವ ಸಂಬಂಧ 1 ರಿಂದ 10ನೇ ತರಗತಿಯವರೆಗೆ ಪ್ರತ್ಯೇಕವಾಗಿ ಮೌಲ್ಯ ಶಿಕ್ಷಣವನ್ನು ಅಳವಡಿಸಲು 10 ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(DSERT) ವತಿಯಿಂದ ರಚಿಸಲಾಗಿದೆ.
ಈ ಸಂಬಂಧ 10 Core Values(ಮೂಲ ಮೌಲ್ಯಗಳು) ಮತ್ತು ಅದಕ್ಕೆ ಸಂಬಂಧಿಸಿದ Sub values(ಉಪ ಮೌಲ್ಯಗಳು) ಗೆ ಅನುಗುಣವಾಗಿ ಚಟುವಟಿಕೆಗಳನ್ನು ರೂಪಿಸಲಾಗಿದೆ.
ಮೂಲ ಮೌಲ್ಯಗಳು (Core Values)
1. ಅನುಭೂತಿ ಮತ್ತು ದಯೆ. (Empathy and Compassion)
2. ಗೌರವ. (Respect)
3. ಪ್ರಾಮಾಣಿಕತೆ ಮತ್ತು ಬದ್ಧತೆ. (Honesty and Integrity)
4. ಸುಸ್ಥಿರ ಜೀವನ ಮತ್ತು ಪರಿಸರ ಜಾಗೃತಿ. (Sustainable living and environmental awareness)
5. ನಾಗರಿಕ ಜವಾಬ್ದಾರಿ. (Civic Responsibility)
6. ವೈವಿಧ್ಯತೆ, ಸಮತೆ, ಮತ್ತು ಒಳಗೊಳ್ಳುವಿಕೆ. (Diversity, Equity and Inclusion)
7. ಭಾವನಾತ್ಮಕ ಬುದ್ದಿವಂತಿಕೆ ಮತ್ತು ಸ್ಥಿತಿಸ್ಥಾಪಕತ್ವ. (Emotional intelligence & Resilience)
8. ವೈಜ್ಞಾನಿಕ ಮನೋಭಾವ ಮತ್ತು ಸೃಜನಶೀಲ ಕಲ್ಪನೆ. (Scientific temper and creative imagination)
9. ಸುರಕ್ಷತೆ. (Safety)
10. ಲಿಂಗ ಸಮಾನತೆ. (Gender Equality)
ಸದರಿ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ಡಿಜಿಟಲ್ ಅವತರಣಿಕೆಯನ್ನು ನವೆಂಬರ್ 01 ಕನ್ನಡ ರಾಜ್ಯೋತ್ಸವದಂದು ಮುಖ್ಯಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ.
ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ಮುದ್ರಿಸಿ ಪ್ರತಿ ವಿದ್ಯಾರ್ಥಿಗೆ ಒಂದು ಚಟುವಟಿಕಾ ಪುಸ್ತಕದಂತೆ ಶಾಲೆಗಳಿಗೆ ಸರಬರಾಜು ಮಾಡಲು KTBS ವತಿಯಿಂದ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ.
2025-26ನೇ ಸಾಲಿನಲ್ಲಿ 1984 ಸಂಪನ್ಮೂಲ ವ್ಯಕ್ತಿ(Master Resource Person)ಗಳಿಗೆ ತರಬೇತಿಯನ್ನು DSERT / ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ(ಡಯಟ್)ಹಂತದಲ್ಲಿ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ನೀಡಲು ಯೋಜಿಸಲಾಗಿದೆ.
ರಾಜ್ಯದ ಸುಮಾರು 96000 ಶಿಕ್ಷಕರಿಗೆ 01 ದಿನದ ತರಬೇತಿಯನ್ನು Cascade mode ನಲ್ಲಿ ಜಿಲ್ಲಾ ಮತ್ತು ಬ್ಲಾಕ್ ಹಂತದಲ್ಲಿ PAB (Planning and Budget) ಅನುಮೋದನೆಯಂತೆ ಆಯೋಜಿಸಲು DSERT ವತಿಯಿಂದ ಯೋಜಿಸಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.