ಬೆಂಗಳೂರು: 2024-25 ನೇ ಸಾಲಿನ ಶಿಕ್ಷಕರ ಹಾಗೂ ಪ್ರಾಥಮಿಕ ಮುಖ್ಯೋಪಾಧ್ಯಾಯರು ಮತ್ತು ಸರ್ಕಾರಿ ಪ್ರೌಢಶಾಲಾ ಶಿಕ್ಷಕರು/ತತ್ವಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯಲ್ಲಿ ವೈದ್ಯಕೀಯ ಮತ್ತು ಅಂಗವಿಕಲ ಆದ್ಯತೆ ಕೋರಿರುವ ಶಿಕ್ಷಕರ ವೈದ್ಯಕೀಯ ಪ್ರಮಾಣ ಪತ್ರಗಳ ನೈಜತೆ ಪರಿಶೀಲನೆ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2024-25 ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆಯಲ್ಲಿ ವಿಭಾಗ ಮಟ್ಟದ ಮತ್ತು ಅಂತರ್ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಶಿಕ್ಷಕರ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗಳನ್ನು ದಿನಾಂಕ:03/10/2025 ರಿಂದ ಹಮ್ಮಿಕೊಳ್ಳಲಾಗಿರುತ್ತದೆ.
ಸದರಿ ವರ್ಗಾವಣೆಯಲ್ಲಿ ವಿಭಾಗಮಟ್ಟದಲ್ಲಿ ಮತ್ತು ಅಂತರ್ ವಿಭಾಗ ಮಟ್ಟದಲ್ಲಿ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ತೀವ್ರತರ ಖಾಯಿಲೆ ಪ್ರಕರಣಗಳು ಮತ್ತು అంగవిశల ಪ್ರಕರಣದಡಿ ಆದ್ಯತೆ ಸಲ್ಲಿಸಿರುವ ಮೂಲ ದಾಖಲೆಗಳ(ವೈದ್ಯಕೀಯ ಪ್ರಮಾಣ ಪತ್ರಗಳು) ಉಲ್ಲೇಖಿತ ಪತ್ರಗಳನ್ವಯ ನೈಜತೆ ಪರಿಶೀಲನೆಯಾಗಬೇಕಿರುತ್ತದೆ.
ಆದದುರಿಂದ ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ವೃಂದದ ಶಿಕ್ಷಕರುಗಳು ತೀವುತರ ಖಾಯಿಲೆ ಪ್ರಕರಣಗಳು ಮತ್ತು ಅಂಗವಿಕಲ ಪ್ರಕರಣದಡಿ ಆದ್ಯತೆ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಶಿಕ್ಷಕರ ಮೂಲ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಕೆಳಕಂಡ ನಮೂನೆಯಲ್ಲಿ ದಾಖಲೆಗಳೊಂದಿಗೆ ಈ ಕಛೇರಿಗೆ ತುರ್ತಾಗಿ ಮರುಟಪಾಲಿನಲ್ಲಿ ಸಲ್ಲಿಸಲು ತಿಳಿಸಿದೆ. ಅನಗತ್ಯ ವಿಳಂಬವಾದಲ್ಲಿ ಸಂಬಂಧಿಸಿದ ಉಪನಿರ್ದೇಶಕರು(ಆಡಳಿತ) ರವರನ್ನೇ ನೇರ ಹೊಣೆ ಮಾಡಲಾಗುವುದು ಎಂದು ಹೇಳಲಾಗಿದೆ.
