ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ  : ವೃತ್ತಿ ಶೈಕ್ಷಣಿಕ ಪ್ರವೇಶಾತಿಗೆ ಆನ್’ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ : 2025-26 ನೇ ಶೈಕ್ಷಣಿಕ ಪ್ರವೇಶಕ್ಕಾಗಿ ಮೆರಿಟ್ ಕಂ ರಿಸರ್ವೇಷನ್ ಆಧಾರಿತ ಸರ್ಕಾರಿ ಸೀಟುಗಳಿಗೆ ಶಿಕಾರಿಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎಸ್ಎಸ್ಎಲ್ಸಿ ಉತೀರ್ಣ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಎಸ್ಎಸ್ಎಲ್ಸಿ ವಿದ್ಯಾರ್ಹತೆಗೆ ಒಟ್ಟು 84 ಸೀಟ್ಗಳಿವೆ. ಇವುಗಳಲ್ಲಿ ಎಲೆಕ್ಟ್ರಿಷಿಯನ್, ಎಲೆಕ್ಟಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್ ಮತ್ತು ಟರ್ನರ್ ಕೋರ್ಸ್ಗಳಿದ್ದು, ತರಬೇತಿ ಅವಧಿ 2 ವರ್ಷ ದ್ದಾಗಿರುತ್ತದೆ.

ಉದ್ಯೋಗ ಯೋಜನೆಯಡಿ ಒಟ್ಟು 172 ಸಿಟ್ಗಳಿವೆ. ಎಸ್ಎಸ್ಎಲ್ಸಿ ಪಾಸಾಗಿರುವ ಅಭ್ಯರ್ಥಿಗಳಿಗೆ ಮೆಕ್ಯಾನಿಕಲ್ ಎಲೆಕ್ಟ್ರಿಕ್ ವೆಹಿಕಲ್, ಸಿಎನ್ಸಿ ಮೆಷಿನಿಂಗ್ ಟೆಕ್ನಿಷಿಯನ್, ವರ್ಚುಯಲ್ ಅನಲೈಸಿನ್ ಅಂಡ್ ಡಿಸೈನರ್ ವೃತ್ತಿಗಳ ಕೋರ್ಸ್ 2 ವರ್ಷಗಳ ಅವಧಿಯದ್ದಾಗಿದೆ. ಹಾಗೂ ಇಂಡಸ್ಟ್ರೀಯಲ್ ರೋಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನಿಫ್ಯಾಕ್ಟರಿಂಗ್ ಟೆಕ್ನಿಷಿಯನ್, ಇಂಜನಿಯರಿಂಗ್ ಡಿಸೈನ್ ಟೆಕ್ನಿಷಿಯನ್ ಹಾಗೂ ಮ್ಯಾನ್ಯುಫಾಕ್ಟರಿಂಗ್ ಪ್ರೋಸಸ್ ಕಂಟ್ರೊಲ್ ಅಂಡ್ ಆಟೋಮೇಷನ್ ವೃತ್ತಿಗಳಿಗೆ 1 ವರ್ಷ ಅವಧಿಯದ್ದಾಗಿದೆ.

ಪಿಪಿಪಿ-ಐಎಂಸಿ(ಮ್ಯಾನೆಜ್ಮೆಟ್ ಸೀಟ್) ನಲ್ಲಿ ಒಟ್ಟು 104 ಸೀಟ್ಗಳಿವೆ. ಎಸ್ಎಸ್ಎಲ್ಸಿ ಪಾಸಾದ ಅಭ್ಯರ್ಥಿಗಳಿಗೆ ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವೃತ್ತಿಗಳಿಗೆ 2 ವರ್ಷಗಳ ಅವಧಿಯದ್ದಾಗಿದ್ದು, ಹಾಗೂ ಎಸ್ಎಸ್ಎಲ್ಸಿ ಅನುತ್ತೀರ್ಣ ಅಥವಾ ಎಂಟನೇ ತರಗತಿ ಉತ್ತೀರ್ಣ ವಿದ್ಯಾರ್ಹತೆಗೆ ವೆಲ್ಡರ್ ವೃತ್ತಿ ಇದ್ದು, ಕೇವಲ 1 ವರ್ಷ ಅವಧಿ ಒಳಗೊಂಡಿದೆ.

ಆಸಕ್ತ ಅಭ್ಯರ್ಥಿಗಳು www.cite.karnataka.gov.in ವೆಬ್ಸೈಟ್ ಮೂಲಕ ಮೇ 28 ರೊಳಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಗೊಂಡ ಸರ್ಕಾರಿ ಐಟಿಐಗಳಲ್ಲಿ ಮೂಲಕ ದಾಖಲಾತಿ ಹಾಗೂ ಅಟೆಸ್ಟೆಡ್ ಜೆರಾಕ್ಸ್ ಕಾಪಿಗಳೊಂದಿಗೆ ನಿಗದಿತ ದಿನಾಂಕದೊಳಗೆ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08187295040ನ್ನು ಸಂಪರ್ಕಿಸುವಂತೆ ಎಂದು ಶಿಕಾರಿಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read