BIG NEWS : ‘ರಾಜ್ಯ ಸರ್ಕಾರಿ’ ನೌಕರರಿಗೆ ಮುಖ್ಯ ಮಾಹಿತಿ : ‘KGID’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ… KGID ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಖಜಾನೆ-2 ಅನುಷ್ಠಾನವಾಗುವ ಮೊದಲು, ಸರ್ಕಾರದ ಇಲಾಖೆಗಳಿಗೆ ನೂತನವಾಗಿ ನೇಮಕಾತಿ ಹೊಂದಿದ ನೌಕರರು ಅವರಿಗೆ ಅನ್ವಯವಾಗುವ ಕೆಜಿಐಡಿ ವಂತಿಗೆಯ ದರದಲ್ಲಿ ವಂತಿಗೆಯ ಮೊದಲ ಕಂತನ್ನು ನಗದಾಗಿ ಪಾವತಿಸಿ, ಪಾಲಿಸಿಗಾಗಿ ಪ್ರಸ್ತಾವನೆಯನ್ನು ಕೆಜಿಐಡಿ ಇಲಾಖೆಗೆ ಸಲ್ಲಿಸಬೇಕಾಗಿರುತ್ತದೆ. ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಚೇಧ 88(ಎ) ರಂತೆ, ಕೆಜಿಐಡಿ ಪಾಲಿಸಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿರುವ ಕುರಿತು ಡಿಡಿಓ ರವರು ವೇತನ ಬಿಲ್ಲಿನಲ್ಲಿ ಪ್ರಮಾಣ ಪತ್ರವನ್ನು ದಾಖಲಿಸಿ ನೂತನವಾಗಿ ನೇಮಕಗೊಂಡಿರುವ ನೌಕರರ ಪ್ರಥಮ ವೇತನವನ್ನು ಸೆಳೆಯಬಹುದಾಗಿತ್ತು.

ಖಜಾನೆ-2 ಹಾಗೂ ನೂತನ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿಯಾದ ನಂತರ, ಕೆಜಿಐಡಿ ಜೊತೆ, ನೂತನ ರಾಷ್ಟ್ರೀಯ ಪಿಂಚಣಿ ಯೋಜನೆಗೆ ನೋಂದಾವಣೆಯಾಗಿ PRAN ಪಡೆದ ನಂತರ ಪ್ರಥಮ ವೇತನವನ್ನು ಸೆಳೆಯಬೇಕಾಗಿದ್ದು, ಕೆಜಿಐಡಿ ಪಾಲಿಸಿ ಸಂಖ್ಯೆಯನ್ನು, PRAN ಪಡೆಯಲು ನೌಕರರ ಐಡಿಯಾಗಿ ಹಾಗೂ ಖಜಾನೆ-2 ರಲ್ಲಿ ಬಳಕೆದಾರರಾಗಿ ಲಾಗಿನ್ ಆಗಲು ಬಳಕೆದಾರರ ಐಡಿ (USER ID) ಯಾಗಿ ಬಳಸಲಾಗುತ್ತಿದೆ. ಕೆಜಿಐಡಿ ವಂತಿಗೆಯ ಮೊದಲ ಕಂತನ್ನು ಪಾವತಿಸಿ ಪಾಲಿಸಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ ನಂತರ, ಪ್ರಸ್ತಾವನೆಯು ಸಂಸ್ಕರಣೆ ಹೊಂದಿ ಪಾಲಿಸಿ ಸ್ವೀಕೃತವಾಗಲು 2 ರಿಂದ 3 ತಿಂಗಳಷ್ಟು ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ನೂತನವಾಗಿ ನೇಮಕಗೊಂಡಿರುವ ನೌಕರರ PRAN ಪಡೆಯಲು ಹಾಗೂ ಪ್ರಥಮ ವೇತನವನ್ನು ಪಾವತಿಸಲು ವಿಳಂಬವಾಗುತ್ತಿದೆ.

ಪ್ರಸ್ತುತ ಹೆಚ್.ಆರ್.ಎಮ್.ಎಸ್ ನಲ್ಲಿ, ನೋಂದಾಯಿತ ನೌಕರರಿಗೆ ಹತ್ತು ಸಂಖ್ಯೆಯ ಐಡಿಯನ್ನು (EMPLOYEE ID) ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಯಾವುದೇ ನೌಕರರು ನೇಮಕಾತಿ ಹೊಂದಿದ ತಕ್ಷಣ ಡಿಡಿಓ ರವರು ಸದರಿ ನೌಕರರನ್ನು ಹೆಚ್ಆರ್ಎಮ್ಎಸ್ ನಲ್ಲಿ ನೋಂದಾಯಿಸಬೇಕಾಗಿದ್ದು, ಸದರಿ ಸಮಯದಲ್ಲಿ, ಹತ್ತು ಸಂಖ್ಯೆಯ ನೌಕರರ ಐಡಿ ಸೃಜನೆಯಾಗುತ್ತದೆ. ಈ ರೀತಿ ಸೃಜನೆಯಾದ ಹತ್ತು ಸಂಖ್ಯೆಯ ನೌಕರರ ಐಡಿಯು ಆಯಾ ನೌಕರರಿಗೆ ವಿಶಿಷ್ಟವಾಗಿದ್ದು ಅವರ ಇಡೀ ಸೇವಾ ಅವಧಿಗೆ ಅನ್ವಯವಾಗುತ್ತದೆ.

ಕೆಜಿಐಡಿ ಪಾಲಿಸಿ ಸಂಖ್ಯೆಯ ಬದಲು, ಹೆಚ್.ಆರ್.ಎಮ್.ಎಸ್ ನಲ್ಲಿ, ಸೃಜನೆಯಾದ ನೌಕರರ ಐಡಿಯನ್ನು PRAN ಪಡೆಯಲು ಹಾಗೂ ಖಜಾನೆ-2 ರಲ್ಲಿ ಲಾಗಿನ್ ಆಗಲು ಬಳಕೆದಾರರ ಐಡಿ (USER ID) ಯಾಗಿ ಬಳಸಬಹುದಾಗಿರುತ್ತದೆ. ಡಿಡಿಓ ರವರು ಕೆಜಿಐಡಿ ಪಾಲಿಸಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿ ಒಂದು ವೇಳೆ ಕೆಜಿಐಡಿ ಪಾಲಿಸಿ ಸ್ವೀಕೃತಿಯಲ್ಲಿ ವಿಳಂಬವಾದಾಗ್ಯೂ, ನೂತನವಾಗಿ ನೇಮಕಗೊಂಡಿರುವ ನೌಕರರ ವೇತನವನ್ನು ಯಾವುದೇ ವಿಳಂಬವಿಲ್ಲದೆ ಸೆಳೆಯಬಹುದಾಗಿರುತ್ತದೆ. ಆದುದರಿಂದ PRAN ಪಡೆಯಲು ಹಾಗೂ ಖಜಾನೆ-2 ರಲ್ಲಿ ಲಾಗಿನ್ ಆಗಲು ಬಳಕೆದಾರರ ಐಡಿ (USER ID) ಯಾಗಿ ಹೆಚ್.ಆರ್.ಎಮ್.ಎಸ್ ನಲ್ಲಿ, ಸೃಜನೆಯಾದ ನೌಕರರ ಐಡಿಯನ್ನು ಬಳಸುವ ಬಗ್ಗೆ ಸೂಕ್ತ ಆದೇಶವನ್ನು ಹೊರಡಿಸಲು ಮೇಲೆ ಓದಲಾದ (1)ರ ಕಡತದಲ್ಲಿ ಖಜಾನೆ ಆಯುಕ್ತರು ಕೋರಿರುತ್ತಾರೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ನೋಂದಾವಣಿಯಾಗಿ PRAN ಪಡೆಯಲು ಹಾಗೂ ಖಜಾನೆ-2 ರಲ್ಲಿ ಲಾಗಿನ್ ಆಗಲು ಬಳಕೆದಾರರ ಐಡಿ (USER ID) ಯಾಗಿ ಬಳಸಲು, ಕೆಜಿಐಡಿ ಪಾಲಿಸಿ ಸಂಖ್ಯೆಯ ಬದಲು, ಹೆಚ್.ಆರ್.ಎಮ್.ಎಸ್ ನಲ್ಲಿ, ಸೃಜನೆಯಾದ ಹತ್ತು ಸಂಖ್ಯೆಯ ನೌಕರರ ಐಡಿಯನ್ನು ಬಳಸಲು ಆದೇಶಿಸಿದೆ.
ಸರ್ಕಾರದ ಸೇವೆಗೆ ನೂತನವಾಗಿ ನೇಮಕಾತಿ ಹೊಂದಿದ ನೌಕರರ ಸಂಬಂಧ ಕೆಜಿಐಡಿ ಪಾಲಿಸಿ ಸ್ವೀಕೃತಿಯಲ್ಲಿ ವಿಳಂಬವಾದಾಗ್ಯೂ ಕೆಜಿಐಡಿ ಪಾಲಿಸಿಗಾಗಿ ಪ್ರಸ್ತಾವವನ್ನು ಸಲ್ಲಿಸಿರುವ ಕುರಿತು, ಡಿಡಿಓ ರವರು ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಚೇಧ 88(ಎ) ರಂತೆ, ಪಾಲಿಸಿಗಾಗಿ ಪ್ರಸ್ತಾವವನ್ನು ಕಳುಹಿಸಿ ಸ್ವೀಕೃತವಾಗುವ ರೆಫರೆನ್ (Reference) ಸಂಖ್ಯೆಯೊಂದಿಗೆ ವೇತನ ಬಿಲ್ಲಿನಲ್ಲಿ ಪ್ರಮಾಣ ಪತ್ರವನ್ನು ದಾಖಲಿಸಿ ನೂತನವಾಗಿ ನೇಮಕಗೊಂಡಿರುವ ನೌಕರರ ವೇತನವನ್ನು ಸೆಳೆಯಲು ಅನುಮತಿ ನೀಡಲಾಗಿದೆ. ಈ ಸಂಬಂಧ ಕ.ಆ.ಸಂ. ಅನುಚ್ಛೇದ 88(ಎ)(2)ಗೆ ಸೂಕ್ತ ತಿದ್ದುಪಡಿ/ಸೇರ್ಪಡೆ ತರಲಾಗುವುದು ಎಂದು ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read