ಯಾತ್ರಿಕರಿಗೆ ಮುಖ್ಯ ಮಾಹಿತಿ : ‘ದಿವ್ಯಾ ಅಯೋಧ್ಯೆ’ ಆ್ಯಪ್ ನಲ್ಲಿ ಈ ಎಲ್ಲಾ ಮಾಹಿತಿಗಳು ಲಭ್ಯ

ನವದೆಹಲಿ : ಮಹತ್ವದ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊಸ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಿದರು.

ದಿವ್ಯಾ ಅಯೋಧ್ಯೆ ಅಪ್ಲಿಕೇಶನ್ ಒನ್-ಸ್ಟಾಪ್ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ, ಪ್ರವಾಸಿಗರು ನಗರಕ್ಕೆ ಕಾಲಿಡುವ ಮೊದಲು ತಮ್ಮ ತೀರ್ಥಯಾತ್ರೆಯ ಬಗ್ಗೆ ಪ್ಲ್ಯಾನ್ ಮಾಡಲು ವಿವರವಾದ ವಿವರಣೆಗಳು ಮತ್ತು ವೇಳಾಪಟ್ಟಿಗಳ ಬಗ್ಗೆ ಮಾಹಿತಿ ನೀಡುತ್ತದೆ.

* ಈ ಆ್ಯಪ್ನಲ್ಲಿ ಪ್ರವಾಸಿಗರು ಒಂದೇ ಸ್ಥಳದಲ್ಲಿ ಇ-ಕಾರ್. ಇ-ಬಸ್ ಮುಂತಾದ ಹಲವು ಸೌಲಭ್ಯಗಳನ್ನು ಬುಕ್ ಮಾಡಬಹುದಾಗಿದೆ.

* Play Store, App Store ನಿಂದ ಡೌನ್ಲೋಡ್ ಮಾಡಿ, ವೈಯಕ್ತಿಕ ವಿವರಗಳನ್ನು ನಮೂದಿಸಿ ಮತ್ತು ಲಾಗಿನ್ ಮಾಡಿಕೊಳ್ಳಬೇಕು. ಆ್ಯಪ್ ಸ್ಥಳೀಯ ತಿನಿಸು, ನೋಡಲೇಬೇಕಾದ ಸ್ಥಳಗಳು ಮತ್ತು ಪ್ರವಾಸದ ಪ್ಯಾಕೇಜ್ಗಳ ವಿವರಗಳನ್ನು ಸಹ ಒದಗಿಸುತ್ತದೆ.

* ಈ ಆಪ್ ಬಳಸಿಕೊಂಡು ಅಯೋಧ್ಯೆ ನಗರದ ಮಾರ್ಗಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದರಿಂದಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವಲ್ಲಿ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗುವುದಿಲ್ಲ.

* ಇದರಿಂದ ಹೋಮ್-ಸ್ಟೇ, ಹೋಟೆಲ್ ಇತ್ಯಾದಿ ವಸತಿ ಸೌಲಭ್ಯಗಳನ್ನು ಈ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು.ಈ ಅಪ್ಲಿಕೇಶನ್ ಮೂಲಕ ವೀಲ್ ಚೇರ್, ಗಾಲ್ಫ್ ಕಾರ್ಟ್ ಇತ್ಯಾದಿಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ನೀವು ಗೂಗಲ್ ಪ್ಲೇ ಸ್ಟೋರ್ನಿಂದ Divya Ayodhya ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು.

https://twitter.com/myogiadityanath/status/1746446318460186651?ref_src=twsrc%5Etfw%7Ctwcamp%5Etweetembed%7Ctwterm%5E1746446318460186651%7Ctwgr%5Eebf9f244aca8f7c22e9665a5be004072df4300dc%7Ctwcon%5Es1_&ref_url=https%3A%2F%2Fwww.news9live.com%2Ftechnology%2Ftech-news%2Fup-cm-yogi-adityanath-unveils-divya-ayodhya-tourism-mobile-app-ahead-of-ram-mandir-inauguration-2407555

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read