ಡಿ.ಎಲ್.ಇಡಿ, ಡಿ.ಪಿ.ಇಡಿ ಕೋರ್ಸ್‌ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: 2ನೇ ಸುತ್ತಿನ ಸೀಟು ಹಂಚಿಕೆ, ದಾಖಲಾತಿ ಪತ್ರ ರವಾನೆ

ಬೆಂಗಳೂರು: 2025-26 ನೇ ಸಾಲಿನ ಡಿ.ಎಲ್.ಇಡಿ/ ಡಿ.ಪಿ.ಇಡಿ/ ಡಿ.ಪಿ.ಎಸ್.ಇ. ಕೋರ್ಸ್‌ಗಳಿಗೆ ಸರ್ಕಾರಿ ಕೋಟಾದಡಿ ಶಿಕ್ಷಣ ಸಂಸ್ಥೆಗಳಿಗೆ ನಿಯಮಾನುಸಾರ ಸೀಟು ಹಂಚಿಕೆ ಮಾಡಿ ಪ್ರಥಮ ಸುತ್ತಿನಲ್ಲಿ ಪಟ್ಟಿ ಪ್ರಕಟಿಸಲಾಗಿತ್ತು.

ವಿಸ್ತರಿಸಿದ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಿ 2ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿಯನ್ನು ಹಾಗೂ ದಾಖಲಾತಿ ಪತ್ರಗಳನ್ನು ಆಯಾ ಜಿಲ್ಲಾ ಡಯಟ್ ಕೇಂದ್ರಗಳಿಗೆ ಕಳುಹಿಸಿದೆ.

ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಿದ ಡಯಟ್ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಆಯ್ಕೆ ಮತ್ತು ಸೀಟು ಹಂಚಿಕೆಯಾದ ಶಿಕ್ಷಣ ಸಂಸ್ಥೆಗಳನ್ನು ಖಚಿತಪಡಿಸಿಕೊಂಡು, ನಿಗದಿಪಡಿಸಲಾದ ದಾಖಲಾತಿ ಶುಲ್ಕಕ್ಕೆ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಯಲ್ಲಿ Joint Director CAC Bangalore ಇವರ ಹೆಸರಿನಲ್ಲಿ ಹುಂಡಿಯನ್ನು ದಿನಾಂಕ:- 01/08/2025 ರಿಂದ 05/08/2025 ರೊಳಗೆ ಪಡೆದು ಸಂಬಂಧಪಟ್ಟ ಡಯಟ್ ಕೇಂದ್ರದಲ್ಲಿ ಸಲ್ಲಿಸುವುದರ ಮೂಲಕ ದಾಖಲಾತಿ ಪತ್ರಗಳನ್ನು ಪಡೆಯುವುದು ಹಾಗೂ ದಿನಾಂಕ:07/08/2025ರ ಒಳಗಾಗಿ ಸಂಬಂಧಪಟ್ಟ ಸಂಸ್ಥೆಗಳಲ್ಲಿ ದಾಖಲಾಗುವುದು. ಅಂತಿಮ ದಿನಾಂಕದ ನಂತರ ದಾಖಲಾತಿಗೆ ಅವಕಾಶವಿರುವುದಿಲ್ಲ.

ಸೂಚನೆ:

ಪ್ರಥಮ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದ್ದ ಅಭ್ಯರ್ಥಿಗಳು ದಿನಾಂಕ:-22/07/2025ರ ಒಳಗೆ ದಾಖಲಾತಿಯಾಗಿಲ್ಲದಿದ್ದು ಅದೇ ಕಾಲೇಜಿನಲ್ಲಿ ಸೀಟುಗಳ ಲಭ್ಯತೆ ಇದ್ದಲ್ಲಿ ಅಂತಹ ಅಭ್ಯರ್ಥಿಗಳಿಗೂ ದಿನಾಂಕ:-05/08/2025ರ ಒಳಗೆ ದಾಖಲಾತಿ ಪತ್ರ ಪಡೆದು ದಿನಾಂಕ:07/08/2025ರ ಒಳಗಾಗಿ ದಾಖಲಾತಿ ಪಡೆಯಲು ಅವಕಾಶ ಕಲ್ಪಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read