‘K-SET’ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ : ವಿವರಗಳ ತಿದ್ದುಪಡಿಗೆ ಅ.6 ರವರೆಗೆ ಅವಕಾಶ.!

ಬೆಂಗಳೂರು : ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 ಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ವಿವರಗಳನ್ನು ತಿದ್ದುಪಡಿ ಮಾಡಲು ಅ.6ರವರೆಗೆ (ಸಂಜೆ 5.30) #KEA ಅವಕಾಶ ಕಲ್ಪಿಸಿದೆ.

ಮೊಬೈಲ್ ದೂರವಾಣಿ ಸಂಖ್ಯೆ ಹೊರತುಪಡಿಸಿ, ಆನ್ ಲೈನ್ ಅರ್ಜಿಯಲ್ಲಿನ ಎಲ್ಲ ವಿವರಗಳ ತಿದ್ದುಪಡಿಗೂ ಅವಕಾಶ ನೀಡಲಾಗಿದೆ. ಒಂದು ವೇಳೆ ದೂರವಾಣಿ ಸಂಖ್ಯೆ ಬದಲಿಸಿಕೊಳ್ಳಬೇಕೆನ್ನುವವರು ಖುದ್ದು ಕೆಇಎಗೆ ಬಂದು ಅರ್ಜಿ ಕೊಡಬೇಕು.

ಒಮ್ಮೆ ತಿದ್ದುಪಡಿ ಮಾಡಿದ ನಂತರ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಎಚ್ಚರ ವಹಿಸಿ ಮಾಡಿ. ಪುನಃ ತಿದ್ದುಪಡಿ ಸಂಬಂಧ ಯಾವುದೇ ಮನವಿಯನ್ನು ಪುರಸ್ಕರಿಸುವುದಿಲ್ಲ ಎಂದು ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್.ಪ್ರಸನ್ನ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read