ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೆಕ್ಕೆಜೋಳ

ಮಳೆಗಾಲದಲ್ಲಿ ಬಿಸಿಬಿಸಿ ತಿನ್ನುವ ಬಯಕೆಯಾಗುತ್ತದೆ. ಮಳೆಯಲ್ಲಿ ತಕ್ಷಣ ನೆನಪಿಗೆ ಬರೋದು ಜೋಳ. ಹುಳಿ-ಖಾರ ಮಿಶ್ರಿತ ಜೋಳ ತಿನ್ನುವುಸು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು.

ಜೋಳ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಹೊಂದಿರುವವರು ಇದನ್ನು ಅವಶ್ಯಕವಾಗಿ ಸೇವಿಸಬೇಕು. ನಾರಿನಂಶ ಹೆಚ್ಚಿರುವ ಕಾರಣ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಮೆಕ್ಕೆ ಜೋಳ ಕಣ್ಣಿಗೆ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಎ ಇರುವುದರಿಂದ ಇದು ದೃಷ್ಟಿ ಚುರುಕುಗೊಳಿಸುತ್ತದೆ. ಮೆಕ್ಕೆ ಜೋಳದಲ್ಲಿರುವ ಕ್ಯಾರೊಟಿನಾಯ್ಡ್  ಕಣ್ಣುಗಳಿಗೆ ಒಳ್ಳೆಯದು.

ಮೆಕ್ಕೆ ಜೋಳದಲ್ಲಿ ಆಂಟಿ-ಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಬಿ ಇತ್ಯಾದಿಗಳು ಮೆಕ್ಕೆ ಜೋಳದಲ್ಲಿ ಸಾಕಷ್ಟು ಕಂಡುಬರುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೂಳೆಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಅಗತ್ಯ. ಕ್ಯಾಲ್ಸಿಯಂ ಕೊರತೆಯಿದ್ದರೆ ಮೂಳೆಗಳು ದುರ್ಬಲಗೊಳ್ಳುತ್ತವೆ. ಮೆಕ್ಕೆ ಜೋಳದಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read