BIG NEWS: 2025ರ ಬಹು ನಿರೀಕ್ಷಿತ ಚಿತ್ರಗಳ‌ ಪಟ್ಟಿ ಪ್ರಕಟಿಸಿದ ಐಎಂಡಿಬಿ; ಸ್ಥಾನ ಗಿಟ್ಟಿಸಿಕೊಂಡ ʼಕಾಂತಾರ 2ʼ

 

ಐಎಂಡಿಬಿ (www.imdb.com) ಜಗತ್ತಿನ ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವಪ್ರಸಿದ್ಧ ತಾಣವಾಗಿದ್ದು, ವಿಶ್ವದಾದ್ಯಂತ ಇರುವ ಕೋಟ್ಯಂತರ ಐಎಂಡಿಬಿ ಬಳಕೆದಾರರ ಪುಟ ವೀಕ್ಷಣೆಯ ಆಧಾರದ ಮೇಲೆ 2025ರ ಭಾರತದ ಬಹುನಿರೀಕ್ಷಿತ ಚಲನಚಿತ್ರಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.

ಬಹುನಿರೀಕ್ಷಿತ ಚಿತ್ರಗಳಲ್ಲಿ ನಂ. 1 ಸ್ಥಾನ ಪಡೆದಿರುವ ಸಿಕಂದರ್ ಚಿತ್ರದ ನಿರ್ದೇಶಕರಾದ ಎ. ಆರ್. ಮುರುಗದಾಸ್‌ ಮಾತನಾಡಿ, “ ಐಎಂಡಿಬಿ 2025ರ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸಿಕಂದರ್ ಸ್ಥಾನ ಪಡೆದಿರುವುದನ್ನು ತಿಳಿದು ವಿನೀತನಾಗಿದ್ದೇನೆ. ಸಲ್ಮಾನ್‌ಖಾನ್‌ ಅವರೊಂದಿಗೆ ಕೆಲಸ ಮಾಡಿದ್ದು ಅದ್ಭುತವಾದ ಅನುಭವ. ಸಿಕಂದರ್ ಚಿತ್ರಕ್ಕಾಗಿ ಅವರು ತೊಡಗಿಸಿಕೊಂಡ ರೀತಿ ಹಾಗೂ ಅವರ ಚೈತನ್ಯ, ಸಿಕಂದರ್ ಚಿತ್ರಕ್ಕೆ ನಾನು ಪದಗಳಲ್ಲಿ ವರ್ಣಿಸಲಾಗದಷ್ಟು ಜೀವವನ್ನು ತುಂಬಿದೆ. ಇದನ್ನು ಸಾಧ್ಯವಾಗಿಸಿದ ಸಾಜಿದ್ ನಾಡಿಯಾಡ್‌ವಾಲ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಸಿಕಂದರ್ ಚಿತ್ರದ ಪ್ರತಿ ದೃಶ್ಯವನ್ನು ಅಳಿಸಲಾಗದ ಗುರುತಾಗಿ ಉಳಿಸುವಂತೆ ರೂಪಿಸಲಾಗಿದೆ. ಪ್ರೇಕ್ಷಕರೊಂದಿಗೆ ಎಂದೆಂದಿಗೂ ಉಳಿಯುವ ಕ್ಷಣಗಳನ್ನು ನೀಡುವುದಕ್ಕಾಗಿ ನಾನು ಹೃದಯಪೂರ್ವಕವಾಗಿ ವಿನ್ಯಾಸ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಐಎಂಡಿಬಿಯ 2025ರ ಭಾರತದ ಬಹುನಿರೀಕ್ಷಿತ ಚಿತ್ರಗಳು

ಸಿಕಂದರ್
ಟಾಕ್ಸಿಕ್‌
ಕೂಲಿ
ಕ್ರಿಶ್‌ 4
ಹೌಸ್‌ಫುಲ್‌ 5
ಬಾಘಿ 4
ದಿ ರಾಜಾ ಸಾಬ್
ವಾರ್ 2
ಎಲ್‌ 2: ಎಂಪುರಾನ್‌
ದೇವ
ಛಾವಾ
ಕಣ್ಣಪ್ಪ
ರೆಟ್ರೊ
ಥಗ್‌ ಲೈಫ್‌
ಜಾಟ್‌
ಸ್ಕೈಫೋರ್ಸ್
ಸಿತಾರೆ ಝಮೀನ್‌ ಪರ್
ಥಾಮಾ
ಕಾಂತಾರ ಎ ಲೆಜೆಂಡ್‌: ಚಾಪ್ಟರ್ 1
ಆಲ್ಫಾ

2025ರಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾದ ಭಾರತೀಯ ಚಲನಚಿತ್ರಗಳಲ್ಲಿ, ಈ ಶೀರ್ಷಿಕೆಗಳು ಐಎಂಡಿಬಿ ಬಳಕೆದಾರರಲ್ಲಿ ಗ್ರಾಹಕರಲ್ಲಿ ಸ್ಥಿರವಾಗಿ ಹೆಚ್ಚು ಜನಪ್ರಿಯವಾಗಿದ್ದವು, ವಿಶ್ವಾದ್ಯಂತ ಐಎಂಡಿಬಿಗೆ ಮಾಸಿಕ 250 ಮಿಲಿಯನ್‌ಗಿಂತಲೂ ಹೆಚ್ಚು ಪುಟ ವೀಕ್ಷಣೆಗಳಿಂದ ಆಧರಿಸಿ ನಿರ್ಧರಿಸಲ್ಪಟ್ಟಿದೆ.

ಈ ಪಟ್ಟಿಯಲ್ಲಿರುವ 20 ಶೀರ್ಷಿಕೆಗಳ ಪೈಕಿ, 12 ಹಿಂದಿ, ಮೂರು ತಮಿಳು ಹಾಗೂ ಕನ್ನಡ, ಮಲಯಾಳಂ ಮತ್ತು ತೆಲುಗಿನ ತಲಾ ಒಂದು ಚಿತ್ರಗಳು ಇವೆ. ಅಕ್ಷಯ್‌ ಕುಮಾರ್ ನಟನೆಯ ಮೂರು ಚಿತ್ರಗಳು ಪಟ್ಟಿಯಲ್ಲಿವೆ : ಹೌಸ್‌ ಫುಲ್ 5 (ನಂ. 5), ಕಣ್ಣಪ್ಪ (ನಂ 12) ಮತ್ತು ಸ್ಕೈಫೋರ್ಸ್‌ (ನಂ. 16), ಮತ್ತು ಅವರಂತೆ ರಶ್ಮಿಕಾ ಮದಣ್ಣ ಅವರ: ಸಿಕಂದರ್ (ನಂ. 1), ಛಾವಾ (ನಂ. 11) ಮತ್ತು ಥಾಮಾ (ನಂ.18). ಮೋಹನ್‌ ಲಾಲ್‌, ಪ್ರಭಾಸ್, ಹೃತಿಕ್ ರೋಶನ್, ಪೂಜಾ ಹೆಗಡೆ ಮತ್ತು ಕೈರಾ ಅಡ್ವಾಣಿ ಅವರ ಈ ಪಟ್ಟಿಯಲ್ಲಿರುವ ತಲಾ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ಪಟ್ಟಿಯಲ್ಲಿರುವ 6 ಚಿತ್ರಗಳು ಸೀಕ್ವೆಲ್‌ಗಳಾಗಿದ್ದು, ಕ್ರಿಶ್ 4( ನಂ.4), ಹೌಸ್‌ಫುಲ್‌ (ನಂ 5), ಬಾಘಿ 4 (ನಂ. 6), ವಾರ್ 2 (ನಂ. 8), ಸಿತಾರೆ ಝಮೀನ್‌ ಪರ್ (ನಂ. 17) ಮತ್ತು ಕಾಂತಾರಾ ಎ ಲೆಜೆಂಡ್‌ : ಚಾಪ್ಟರ್ 1 (ನಂ. 19).‌

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read