BREAKING : ನಾನಿನ್ನೂ ಜೀವಂತವಾಗಿದ್ದೇನೆ, ನನಗೆ ಏನೂ ಆಗಿಲ್ಲ : ಸಾವಿನ ಸುದ್ದಿಗೆ ನಟಿ ಪೂನಂಪಾಂಡೆ ತೆರೆ

ನಟಿ ಪೂನಂಪಾಂಡೆ ಗರ್ಭಕಂಠ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ ಎಂಬ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು, ಆದರೆ ಇದೀಗ ಅವರು ಬದುಕಿರುವುದಾಗಿ ವರದಿಯಾಗಿದೆ.

‘ನಾನು ಬದುಕಿದ್ದೇನೆ, ನನಗೆ ಏನೂ ಆಗಿಲ್ಲ ಎಂದು ನಟಿ ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು ಗರ್ಭಕಂಠ ಕ್ಯಾನ್ಸರ್ ನಿಂದ ಸತ್ತಿಲ್ಲ, ಈ ಖಾಯಿಲೆಯ ಬಗ್ಗೆ ಅರಿವು ಮೂಡಿಸಲು ಹಾಗೆ ಮಾಡಿದೆ , ಕ್ಷಮೆ ಇರಲಿ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನಾನು ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್ ನನ್ನನ್ನು ಬಲಿ ತೆಗೆದುಕೊಳ್ಳಲಿಲ್ಲ, ಆದರೆ ದುರಂತವೆಂದರೆ, ಈ ರೋಗವನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಜ್ಞಾನದ ಕೊರತೆಯಿಂದ ಉಂಟಾದ ಸಾವಿರಾರು ಮಹಿಳೆಯರ ಜೀವವನ್ನು ಇದು ಬಲಿ ತೆಗೆದುಕೊಂಡಿದೆ. ಖಾಯಿಲೆ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಹೀಗೆ ಮಾಡಿದೆ. ಈ ಖಾಯಿಲೆಯ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಗೆ ಮಾಹಿತಿ ನೀಡೋಣ..ಕ್ಷಮೆ ಇರಲಿ ಎಂದು ಪೋಸ್ಟ್ ಮಾಡಿದ್ದಾರೆ.

 

ಜನಪ್ರಿಯ ರೂಪದರ್ಶಿ ಮತ್ತು ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ ಎಂದು ನಟಿಯ ಮ್ಯಾನೇಜರ್ ಹೇಳಿದ್ದರು.. ಅವರ ತಂಡವು ಅವರ ನಿಧನದ ಬಗ್ಗೆ ಅಧಿಕೃತ ಟಿಪ್ಪಣಿಯನ್ನು ಸಹ ಬಿಡುಗಡೆ ಮಾಡಿತ್ತು . ಈ ಸುದ್ದಿ ಎಲ್ಲರಿಗೂ ಆಘಾತವನ್ನುಂಟು ಮಾಡಿತ್ತು.

ಈ ನಡುವೆ ಚಲನಚಿತ್ರ ವಿಮರ್ಶಕ ಕಮಾಲ್ ಆರ್ ಖಾನ್ (ಕೆಆರ್ಕೆ) ಪೂನಂ ಸಾವಿನ ಸುದ್ದಿಯನ್ನು ತಳ್ಳಿಹಾಕಿದ್ದರು. ಇದು ಪ್ರಚಾರದ ಸ್ಟಂಟ್ ಎಂದು ಕರೆದಿದ್ದರು. ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ, ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ಹೇಳಿದ್ದರು. ಅದು ಈಗ ನಿಜವಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read