ಬೆಂಗಳೂರು : ಅಕ್ರಮ ಪಿಎಸ್ ಐ ನೇಮಕಾತಿ ಕೇಸ್ ಗೆ ಸಂಬಂಧಿಸಿದಂತೆ ಪ್ರಕರಣ ರದ್ದು ಕೋರಿ ಎಡಿಜಿಪಿ ಅಮೃತ್ ಪಾಲ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಅಮೃತ್ ಪಾಲ್ ಪಿಎಸ್ ಐ ನೇಮಕಾತಿಯ ಉಸ್ತುವಾರಿ ವಹಿಸಿದ್ದರು. ಅಲ್ಲದೇ ಸೇಫ್ ಲಾಕ್ ಕಿ ಅಮೃತ್ ಪಾಲ್ ಬಳಿಯೇ ಇತ್ತು. ಕೀ ಕಿರಿಯ ಅಧಿಕಾರಿಗಳಿಗೆ ಕೊಟ್ಟು ದುರುಪಯೋಗ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
545 ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಪೊಲೀಸ್ ಹಿರಿಯ ಅಧಿಕಾರಿಗಳೇ ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಅಮೃತ್ ಪಾಲ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಜೈಲುಪಾಲಾಗಿದ್ದರು. ನಂತರ ಅಮೃತ್ ಪಾಲ್ ಜಾಮೀನಿನ ಮೂಲಕ ಹೊರಗಡೆ ಬಂದಿದ್ದರು.
You Might Also Like
TAGGED:ಪಾಲ್