ದ್ವಿತೀಯ ಪಿಯುಸಿ ಪರೀಕ್ಷೆ-01: ಫ್ರೆಂಚ್ ವಿಷಯದ ಪರೀಕ್ಷೆಗಳಲ್ಲಿ ಅನುಸರಿಸಬೇಕಾದ ಪದ್ಧತಿ ಹಾಗೂ ಕ್ರಮಗಳ ಕುರಿತು ಸುತ್ತೋಲೆ

ಬೆಂಗಳೂರು : 2024ರ ದ್ವಿತೀಯ ಪಿಯುಸಿ ಪರೀಕ್ಷೆ-01ಕ್ಕೆ ಸಂಬಂಧಿಸಿದಂತೆ, ಫ್ರೆಂಚ್ ವಿಷಯದ ಪರೀಕ್ಷೆಗಳಲ್ಲಿ ಅನುಸರಿಸಬೇಕಾದ ಪರೀಕ್ಷಾ ಪದ್ಧತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುತ್ತೋಲೆ ಹೊರಡಿಸಲಾಗಿದೆ.

2024ರ ದ್ವಿತೀಯ ಪಿಯುಸಿ ಪರೀಕ್ಷೆ-01ಕ್ಕೆ ಸಂಬಂಧಿಸಿದಂತೆ, ಫ್ರೆಂಚ್ ವಿಷಯದ ಕುರಿತು, ಈ ಕೆಳಕಂಡ ಸೂಚನೆಗಳ ಪ್ರಕಾರ ಕಡ್ಡಾಯವಾಗಿ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಿದೆ.

  1. 2024ರ ದ್ವಿತೀಯ ಪಿಯುಸಿ ಪರೀಕ್ಷೆ-01ಕ್ಕೆ Regular ವಿದ್ಯಾರ್ಥಿಗಳಿಗೆ ಫ್ರೆಂಚ್ ವಿಷಯದಲ್ಲಿ ಮೌಖಿಕ ಪರೀಕ್ಷೆಯ ಬದಲು ಆಂತರಿಕ ಮೌಲ್ಯಮಾಪನ 20 ಅಂಕಗಳಿಗೆ ನಡೆಯುತ್ತದೆ ಹಾಗೂ Regular ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಸ್ಯಾಟ್ಸ್ ಮುಖಾಂತರ Online ನಲ್ಲಿ ನಮೂದಿಸುವ ಬಗ್ಗೆ, ಸುತ್ತೋಲೆ ಸಂಖ್ಯೆ : ಕಶಾಪಮೌನಿಮಂ:ಮಾವಮಾ4:ದ್ವಿಪಿಯುಸಿ.ಪ್ರಾ.ಪ-2023- 24ರ ಪತ್ರ ದಿನಾಂಕ : 23.12.2023ರ ಕ್ರಮ ಸಂಖ್ಯೆ 32ರಲ್ಲಿ ಈಗಾಗಲೇ ತಿಳಿಸಲಾಗಿರುತ್ತದೆ. ಸದರಿ ಸುತ್ತೋಲೆಯಂತೆ ಕ್ರಮವಹಿಸಲು ಸೂಚಿಸಿದೆ.

  1. 2024ರ ದ್ವಿತೀಯ ಪಿಯುಸಿ ಪರೀಕ್ಷೆ-01ಕ್ಕೆ ಫ್ರೆಂಚ್ ವಿಷಯದಲ್ಲಿ ನೊಂದಾಯಿಸಿಕೊಂಡಿರುವ ಪುನರಾವರ್ತಿತ (Repeaters) ವಿದ್ಯಾರ್ಥಿಗಳಿಗೆ ಮಾತ್ರ ಈ ಹಿಂದಿನ ವರ್ಷಗಳ ಪರೀಕ್ಷೆಗಳಲ್ಲಿ ನಡೆಸಲಾಗುತ್ತಿದ್ದಂತಹ, ಮಾಖಿಕ ಪರೀಕ್ಷೆಯು ಪ್ರಸ್ತುತ 2024ರ ದ್ವಿತೀಯ ಪಿಯುಸಿ ಪರೀಕ್ಷೆ-01ರಲ್ಲಿ ಇರುವುದಿಲ್ಲ. ಈ ಪುನರಾವರ್ತಿತ ವಿದ್ಯಾರ್ಥಿಗಳಿಗೆ, 2024ರ ದ್ವಿತೀಯ ಪಿಯುಸಿ ಪರೀಕ್ಷೆ-01ರಲ್ಲಿ, 80 ಅಂಕಗಳ ತಾತ್ವಿಕ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು 100 ಅಂಕಗಳಿಗೆ ಪರಿವರ್ತಿಸಿ ಫಲಿತಾಂಶವನ್ನು ಪ್ರಕಟಿಸಲಾಗುವುದು. ಪುನರಾವರ್ತಿತ ವಿದ್ಯಾರ್ಥಿಗಳು ತಾತ್ವಿಕ ಪರೀಕ್ಷೆಯನ್ನು ಮಾತ್ರ ಬರೆಯುವುದು ಎಂಬ ಅಂಶವನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರುಗಳು ಫ್ರೆಂಚ್ ವಿಷಯದ ಪುನರಾವರ್ತಿತ ವಿದ್ಯಾರ್ಥಿಗಳಿಗೆ ತಿಳಿಸಲು ಸೂಚಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read