BIG NEWS : ನಿಮ್ಮ ಆರೋಪ ಸತ್ಯವಾಗಿದ್ದರೆ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ನೀಡಿ : ರಾಹುಲ್ ಗಾಂಧಿಗೆ ‘JDS’ ಸವಾಲ್.!

ಬೆಂಗಳೂರು : ನಿಮ್ಮ ಆರೋಪ ಸತ್ಯವಾಗಿದ್ದರೆ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ನೀಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜೆಡಿಎಸ್ ಸವಾಲ್ ಹಾಕಿದೆ.

ಟ್ವೀಟ್ ನಲ್ಲಿ ಕುಟುಕಿದ ಜೆಡಿಎಸ್ ‘@RahulGandhiಅವರೇ ನೀವು ಮತ್ತು ನಿಮ್ಮ ರಾಷ್ಟ್ರೀಯ
@INCIndiaಪಕ್ಷ ಮತಗಳ್ಳತನ ಆಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದೀರಿ. ನಿಮ್ಮ ಗಂಭೀರ ಆರೋಪಕ್ಕೆ ಚುನಾವಣಾ ಆಯೋಗವು ಸ್ಪಂದಿಸಿದೆ. ಒಂದು ವೇಳೆ ನಿಮ್ಮ ಆರೋಪ ಸತ್ಯವಾಗಿದ್ದರೆ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ನೀಡಿ. ಪ್ರತಿಭಟನೆ ಬಳಿಕ @ECISVEEPಚುನಾವಣಾ ಆಯೋಗದ ಭೇಟಿ ಏಕಾಏಕಿ ರದ್ದು ಮಾಡಿದ್ದು ಯಾಕೆ ಮಿಸ್ಟರ್ ರಾಹುಲ್ ಗಾಂಧಿ ? ಗಾಳಿಯಲ್ಲಿ ಮಾತಿನ ಗುಂಡು ಹೊಡೆಯುವುದು ನಿಮಗೆ ವ್ಯಾಧಿಯಾಗಿಬಿಟ್ಟಿದೆ. ನಿಮ್ಮ ಅಪ್ರಬುದ್ಧಿಯ ಆಧಾರ ರಹಿತ ಹೇಳಿಕೆಗಳಿಗೆ ಕೆಳ ನ್ಯಾಯಾಲಯಗಳು ಸೇರಿದಂತೆ ಸುಪ್ರೀಂಕೋರ್ಟ್ ಸಹ ಹಲವು ಬಾರಿ ಛೀಮಾರಿ ಹಾಕಿದೆ. ಇಲ್ಲ ಸಲ್ಲದ ಆರೋಪ ಮಾಡುವುದು, ಬಳಿಕ ಕೋರ್ಟ್’ನಲ್ಲಿ ಕ್ಷಮೆ ಕೇಳುವುದು ನಿಮಗೆ ರೂಢಿಗತವಾಗಿರುವ ದುರಭ್ಯಾಸ. ರಾಹುಲ್ ಗಾಂಧಿ ಅವರೇ, ಮೊದಲು ಚುನಾವಣಾ ಆಯೋಗದ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ನೀಡಿ. ಚುನಾವಣಾ ಆಯೋಗದ ಸವಾಲು ಸ್ವೀಕರಿಸಿ.

ಚುನಾವಣಾ ಅಕ್ರಮ ಶೂರ@siddaramaiah ! ನೀವು ನೈತಿಕತೆ ಉಳಿಸಿಕೊಂಡಿದ್ದರೆ ಮೊದಲು ರಾಜೀನಾಮೆ ಕೊಡಿ. ನೀವು ಅಧಿಕಾರದಲ್ಲಿರಲು ನಾಲಯಕ್ಕು. ಹಿಂದೆ ಬಾದಾಮಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋಲುವ ಹಂತದಲ್ಲಿ ನೀವು 3000 ಮತಗಳನ್ನು ಖರೀದಿಸಿ ಅಕ್ರಮವಾಗಿ ಗೆಲುವು ಸಾಧಿಸಿದ್ದೀರಿ. ನಿಮ್ಮ ಅಕ್ರಮ ಗೆಲುವಿಗೆ ನಿಮ್ಮ ಆಪ್ತ ಸ್ನೇಹಿತ ಸಿ.ಎಂ. ಇಬ್ರಾಹಿಂ ಸಾಕ್ಷಿಯಾಗಿದ್ದಾರೆ. “ಮಾಡುವುದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ” ಎನ್ನುವಂತೆ ಭ್ರಷ್ಟ ಸಿದ್ದರಾಮಯ್ಯ ಮತ್ತು @INCKarnataka
ಮಾಡುವುದೆಲ್ಲ ಬ್ರಹ್ಮಾಂಡ ಭ್ರಷ್ಟಾಚಾರ. ಎಷ್ಟೇ ಆದರೂ ಚುನಾವಣಾ ಅಕ್ರಮ ಎಸಗುವುದು ಕಾಂಗ್ರೆಸ್ ಪಕ್ಷದ DNA ಯಲ್ಲಿಯೇ ರಕ್ತಗತವಾಗಿ ಬಂದಿದೆ. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಅಕ್ರಮ ಎಸಗಿ ಕೋರ್ಟ್’ನಲ್ಲಿ ಮುಖಭಂಗ ಅನುಭವಿಸಿ, ಸಂಸತ್ ಸದಸ್ಯತ್ವ ಅನರ್ಹತೆಗೊಂಡು, ಸಂವಿಧಾನವನ್ಮು ಕತ್ತಲಿನಲಿಟ್ಟು ದೇಶದಲ್ಲಿ “ತುರ್ತು ಪರಿಸ್ಥಿತಿ ಹೇರಿದ” ಕರಾಳ ಇತಿಹಾಸ ಕಾಂಗ್ರೆಸ್ ಪಕ್ಷದ್ದು ಮತ್ತು ಕಾಂಗ್ರೆಸ್ಸಿಗರದ್ದು. @RahulGandhi ಅವರೇ, 2018ರ ಬಾದಾಮಿ ಚುನಾವಣೆ ಮತ್ತು ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸ್ವತಃ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗರು ನಡೆಸಿರುವ ಚುನಾವಣಾ ಅಕ್ರಮಗಳಿಗೆ ನೀವು ಮತ್ತು ನಿಮ್ಮ ಪಕ್ಷದ ನಾಯಕರು ಮೊದಲು ಸಾರ್ವಜನಿಕವಾಗಿ ಕ್ಷಮೆ ಕೇಳಿ ಎಂದು ಜೆಡಿಎಸ್ ಕುಟುಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read