ಪೂರ್ವಜರ ಆಶೀರ್ವಾದ ಬೇಕೆಂದ್ರೆ ಪಿತೃ ಪಕ್ಷದಲ್ಲಿ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ

ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ಮಹತ್ವದ ಸ್ಥಾನವಿದೆ. ಪಿತೃ ಪಕ್ಷದಲ್ಲಿ ಅನೇಕ ಕೆಲಸಗಳನ್ನು ಮಾಡಬಾರದು. ಹಾಗೆ ಪೂರ್ವಜರನ್ನು ಅವಶ್ಯಕವಾಗಿ ನೆನೆಯಬೇಕು.

ವಾಸ್ತವವಾಗಿ ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡುವವರು ಕೂದಲು ಕತ್ತರಿಸಬಾರದು. ಕೂದಲು ಕತ್ತರಿಸಿದ್ರೆ ಪೂರ್ವಜರು ಕೋಪಗೊಳ್ತಾರೆಂಬ ನಂಬಿಕೆಯಿದೆ.

ಪಿತೃಪಕ್ಷದಂದು ಯಾವುದೇ ರೂಪದಲ್ಲಿ ಪೂರ್ವಜರು ನಿಮ್ಮ ಮುಂದೆ ಬರಬಹುದು. ಹಾಗಾಗಿ ಮನೆಗೆ ಬರುವ ಭಿಕ್ಷುಕರನ್ನು ಕಡೆಗಣಿಸಬೇಡಿ. ಮನೆಗೆ ಬರುವ ಯಾವುದೇ ಭಿಕ್ಷುಕನನ್ನು ಖಾಲಿ ಕೈನಲ್ಲಿ ಕಳುಹಿಸಬೇಡಿ.

ಪಿತೃ ಪಕ್ಷ ಒಳ್ಳೆಯ ಸಮಯವಲ್ಲ ಎಂಬ ನಂಬಿಕೆಯಿದೆ. ಹಾಗಾಗಿ ಯಾವುದೇ ಒಳ್ಳೆ ಕೆಲಸವನ್ನು ಶುರು ಮಾಡಬೇಡಿ. ಹಾಗೆ ಯಾವುದೇ ವಸ್ತುಗಳನ್ನು ಖರೀದಿ ಮಾಡಬೇಡಿ. ಬಟ್ಟೆ, ವಸ್ತು, ವಾಹನ ಸೇರಿದಂತೆ ಯಾವುದೇ ವಸ್ತುವನ್ನು ಖರೀದಿಸಬೇಡಿ.

ಪಿತೃ ಪಕ್ಷದಂದು ಹಿತ್ತಾಳೆ, ತಾಮ್ರದ ಪಾತ್ರೆಯನ್ನು ಮಾತ್ರ ಪೂಜೆಗೆ ಬಳಸಿ. ಕಬ್ಬಿಣದ ಪಾತ್ರೆಯನ್ನು ಬಳಸಬೇಡಿ. ಇದು ಅಶುಭ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read