ಆಕರ್ಷಕ ಸ್ತನ ಬೇಕೆಂದ್ರೆ ಮೊದಲು ಬ್ರಾ ಬಗ್ಗೆ ತಿಳಿದುಕೊಳ್ಳಿ

ಹುಡುಗಿಯರು ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ಸ್ತನ ಕೂಡ ಮಹಿಳೆಯರ ಸೌಂದರ್ಯ ಹೆಚ್ಚಿಸುವಲ್ಲಿ ಮಹತ್ವದ ಕೆಲಸ ಮಾಡುತ್ತದೆ. ಸರಿ ಆಕಾರದ ಸ್ತನ, ಹುಡುಗಿಯರು ಒಳ್ಳೆ ಫಿಗರ್ ಪಡೆಯಲು ನೆರವಾಗುತ್ತದೆ. ಸ್ತನ ಒಳ್ಳೆ ಆಕಾರ ಪಡೆಯಬೇಕೆಂದ್ರೆ ಬ್ರಾ ಮಹತ್ವದ ಪಾತ್ರ ವಹಿಸುತ್ತದೆ. ಬ್ರಾ ಧರಿಸುವ ಮೊದಲು ಅದ್ರ ಬಗ್ಗೆ ಹುಡುಗಿಯರು ತಿಳಿದಿರಬೇಕಾಗುತ್ತದೆ.

ಸರಿಯಾದ ಗಾತ್ರದ ಬ್ರಾ ಖರೀದಿ ಬಹಳ ಮುಖ್ಯ. ನಿಮ್ಮ ಸ್ತನದ ಗಾತ್ರಕ್ಕಿಂತ ಸಣ್ಣ ಅಥವಾ ದೊಡ್ಡ ಬ್ರಾ ಖರೀದಿ ಮಾಡಬಾರದು. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗೆ ಬ್ರಾವನ್ನು ಇಡುವ ಪದ್ಧತಿಯ ಬಗ್ಗೆಯೂ ತಿಳಿದಿರಬೇಕು. ಪ್ಯಾಡೆಡ್ ಬ್ರಾವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಅಲ್ಲಿ ಇಲ್ಲಿ ಸೇರಿಸಿಟ್ಟರೆ ಅದ್ರ ಶೇಪ್ ಹಾಳಾಗುತ್ತದೆ.

ಎಲ್ಲ ಬ್ರಾ ಎಲ್ಲ ಡ್ರೆಸ್ ಗೆ ಹೊಂದಿಕೆಯಾಗುವುದಿಲ್ಲ. ಹಾಗಾಗಿ ಯಾವ ಡ್ರೆಸ್ ಧರಿಸುತ್ತಿದ್ದೀರಿ ಎನ್ನುವ ಆಧಾರದ ಮೇಲೆ ಬ್ರಾ ಧರಿಸಿ. ಟೀ ಶರ್ಟ್ ಗೆ ಮತ್ತು ಕುರ್ತಾಕ್ಕೆ ಒಂದೇ ರೀತಿಯ ಬ್ರಾ ಧರಿಸುವುದಾದ್ರೆ ಶೇಪ್ ಸರಿಯಾಗಿದೆಯಾ ಎಂಬುದನ್ನು ನೋಡಿಕೊಳ್ಳಿ.

ಬ್ರಾ ಖರೀದಿ ವೇಳೆ ಟ್ರಯಲ್ ನೋಡಿ. ಬಟ್ಟೆ ಖರೀದಿ ಮಾಡುವ ಮೊದಲು ಟ್ರಯಲ್ ನೋಡ್ತೇವೆ. ಅದೇ ರೀತಿ ಬ್ರಾ ಖರೀದಿ ವೇಳೆಯೂ ಟ್ರಯಲ್ ನೋಡಿಯೇ ಖರೀದಿ ಮಾಡಿ.

ಬ್ರಾ ಬಳಸುವಾಗ ಎಚ್ಚರವಿರಲಿ. ದುಬಾರಿ ಬ್ರಾ ಖರೀದಿ ಮಾಡಿದ ನಾಲ್ಕೈದು ದಿನಗಳಲ್ಲಿಯೇ ಹಾಳಾದ್ರೆ ಬೇಸರವಾಗುತ್ತದೆ. ಬ್ರಾವನ್ನು ಎಲ್ಲ ಬಟ್ಟೆ ಜೊತೆ ತೊಳೆಯಬೇಡಿ. ಬ್ರಾವನ್ನು ಕೈನಲ್ಲಿ ತೊಳೆದ್ರೆ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read