ಈ ಮನೆಮದ್ದು ಉಪಯೋಗಿಸಿದ್ರೆ ಹಲ್ಲು ನೋವಿಗೆ ಸಿಗುತ್ತೆ ತಕ್ಷಣದಲ್ಲೇ ಸಿಗುತ್ತೆ ಪರಿಹಾರ…..!

ಹಲ್ಲುನೋವು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಹಲ್ಲುಗಳಲ್ಲಿ ಹುಳುಕು, ಕ್ಯಾಲ್ಸಿಯಂ ಕೊರತೆ, ಸರಿಯಾಗಿ ಹಲ್ಲುಜ್ಜದೇ ಇರುವುದು, ಬ್ಯಾಕ್ಟೀರಿಯಾ ಸೋಂಕು ಹೀಗೆ ಹಲವು ಕಾರಣಗಳಿಂದ ಹಲ್ಲು ನೋವು ಬರುತ್ತದೆ.

ಹಲ್ಲುನೋವಿಗೆ ಪದೇ ಪದೇ ಪೇಯ್ನ್‌ ಕಿಲ್ಲರ್‌ಗಳನ್ನು ಸೇವನೆ ಮಾಡುವುದು ಸೂಕ್ತವಲ್ಲ. ಇದು ನಮ್ಮ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹಲ್ಲುನೋವು ಕಾಣಿಸಿಕೊಂಡಾಗ ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ಮಾಡಿ.

1. ಲವಂಗ

ಲಂವಂಗ ಹಲ್ಲು ನೋವನ್ನು ಮಾಯ ಮಾಡಬಲ್ಲದು. ಶತಮಾನಗಳಿಂದಲೂ ನಮ್ಮ ಪೂರ್ವಜರು ಹಲ್ಲುನೋವಿಗೆ ಲವಂಗವನ್ನು ಔಷಧವಾಗಿ ಬಳಸುತ್ತಿದ್ದಾರೆ. ಲವಂಗವನ್ನು ಆಯುರ್ವೇದ ಔಷಧವೆಂದು ಪರಿಗಣಿಸಲಾಗುತ್ತದೆ. ಎರಡರಿಂದ ಮೂರು ಲವಂಗವನ್ನು ತೆಗೆದುಕೊಂಡು, ಅದನ್ನು ಸ್ವಲ್ಪ ಜಜ್ಜಿ ನೋವಿರುವ ಹಲ್ಲಿನ ಕೆಳಗೆ ಇಟ್ಟುಕೊಳ್ಳುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.

2.ಇಂಗು

ಹಲ್ಲುನೋವಿಗೆ ಇಂಗು ಕೂಡ ಅತ್ಯಂತ ಪರಿಣಾಮಕಾರಿ ಮನೆಮದ್ದುಗಳಲ್ಲೊಂದು. ಎರಡು ಮೂರು ಚಿಟಿಕೆ ಇಂಗಿಗೆ ಎರಡರಿಂದ ನಾಲ್ಕು ಹನಿ ನಿಂಬೆ ರಸವನ್ನು ಬೆರೆಸಿ. ಈ ಪೇಸ್ಟ್‌ನಿಂದ ಹಲ್ಲುಗಳನ್ನು ಮಸಾಜ್ ಮಾಡಿಕೊಳ್ಳಿ. ಸ್ವಲ್ಪ ಸಮಯದಲ್ಲೇ ಹಲ್ಲು ನೋವು ಕಡಿಮೆಯಾಗುತ್ತದೆ.

3. ರಾಕ್ ಸಾಲ್ಟ್‌ 

ಕಲ್ಲುಪ್ಪು ಆರೋಗ್ಯಕ್ಕೆ ಒಳ್ಳೆಯದು. ಹಲ್ಲುನೋವು ಬಂದಾಗ ಒಂದು ಲೋಟ ಬೆಚ್ಚಗಿನ ನೀರಿಗೆ ಕಲ್ಲು ಉಪ್ಪನ್ನು ಬೆರೆಸಿ ಆ ನೀರಿನಿಂದ ಬಾಯಿಯನ್ನು ಸ್ವಚ್ಛಗೊಳಿಸಿ. ದಿನಕ್ಕೆ ಕನಿಷ್ಠ ಎರಡರಿಂದ ಮೂರು ಬಾರಿ ಈ ರೀತಿ ಗಾರ್ಗ್ಲಿಂಗ್ ಮಾಡುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.

4. ಈರುಳ್ಳಿ

ಹಲ್ಲುನೋವು ಇದ್ದರೆ ಈರುಳ್ಳಿಯನ್ನು ಬಳಸಿಯೂ ಪರಿಹಾರ ಪಡೆಯಬಹುದು. ಈರುಳ್ಳಿಯನ್ನು ಕತ್ತರಿಸಿ ಚಿಕ್ಕ ಹೋಳು ಮಾಡಿಕೊಂಡು, ಅದನ್ನು ನೋವಿರುವ ಕಡೆ ಇಟ್ಟು ಚೆನ್ನಾಗಿ ಅಗಿದರೆ ಪರಿಹಾರ ಸಿಗುತ್ತದೆ. ನೋವಿರುವ ಜಾಗಕ್ಕೆ ಈರುಳ್ಳಿ ರಸ ಸೇರಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read