ಚಳಿಗಾಲದಲ್ಲಿ 10 ನಿಮಿಷ ಎಳೆಬಿಸಿಲಿನಲ್ಲಿ ಕುಳಿತುಕೊಂಡರೆ ಸುಳಿಯುವುದಿಲ್ಲ ನಿಮ್ಮ ಬಳಿ ಈ ಕಾಯಿಲೆ

ಚಳಿಗಾಲ ಬಂತೆಂದರೆ ಎಲ್ಲರೂ ಬಿಸಿಲಿನಲ್ಲಿ ಕೂರಲು ಇಷ್ಟ ಪಡುತ್ತಾರೆ. ಈ ಅಭ್ಯಾಸ ಆರೋಗ್ಯಕ್ಕೂ ಒಳ್ಳೆಯದು. ಚಳಿಗಾಲದಲ್ಲಿ ಕನಿಷ್ಠ 10 ನಿಮಿಷವಾದರೂ ಎಳೆ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ಇದರಿಂದ ಅನೇಕ ಪ್ರಯೋಜನಗಳಿವೆ. ವಿಟಮಿನ್ ಡಿ ಕೊರತೆಯನ್ನೂ ನೀಗಿಸಬಹುದು.

ಘೋರ ಚಳಿಯಲ್ಲಿ ಸೂರ್ಯನ ಬೆಳಕಿನ ಅವಶ್ಯಕತೆ ತುಂಬಾ ಇರುತ್ತದೆ. ಚಳಿಯಿಂದಾಗಿ ಅನೇಕರು ಹೊದಿಕೆಯಿಂದ ಹೊರಗೆ ಬರುವುದಿಲ್ಲ. ಆದರೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದೇ ಇದ್ದರೆ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. 10 ನಿಮಿಷವಾದರೂ ಬಿಸಿಲಿನಲ್ಲಿ ಕೂರುವುದರಿಂದ ವಿಟಮಿನ್‌ ಡಿ ಸಿಗುತ್ತದೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಿರುವವರು ಕಡ್ಡಾಯವಾಗಿ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ಬಿಸಿಲಿನಲ್ಲಿ ಕುಳಿತರೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಇದು ದೇಹದ ಆಯಾಸವನ್ನು ಸಹ ತೆಗೆದುಹಾಕುತ್ತದೆ.

ನಿಮಗೆ ನಿದ್ದೆ ಮಾಡಲು ಸಾಧ್ಯವಾಗದಿದ್ದರೆ ಮತ್ತು ಅದರಿಂದ ತುಂಬಾ ತೊಂದರೆಯಾಗಿದ್ದರೆ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ನಂತರ ಮಲಗಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ಸೂರ್ಯನ ಬೆಳಕು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳನ್ನು ತಡೆಗಟ್ಟಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read