ಚೌತಿಯಂದು ಚಂದ್ರನನ್ನು ನೋಡಿದ್ರೆ ದೋಷ ಪರಿಹರಿಸಲು ಜಪಿಸಿ ಈ ʼಮಂತ್ರʼ

ಆಕಾಶದಲ್ಲಿ ಹೊಳೆಯುವ ಚಂದ್ರ ಎಲ್ಲರಿಗೂ ಇಷ್ಟ. ಹುಣ್ಣಿಮೆ ಚಂದ್ರನ ಸೌಂದರ್ಯವನ್ನು ಹಾಡಿ ಹೊಗಳಲಾಗುತ್ತದೆ. ಆದ್ರೆ ಸುಂದರವಾಗಿರುವ ಈ ಚಂದ್ರನನ್ನು ವಿಶೇಷ ಸಂದರ್ಭದಲ್ಲಿ ನೋಡಿದ್ರೆ ದೋಷ ಕಾಡುತ್ತದೆ. ಭಾದ್ರಪದ ಶುಕ್ಲ ಮಾಸದ ಚತುರ್ಥಿ ದಿನ ಚಂದ್ರನನ್ನು ನೋಡಬಾರದು. ಅಪ್ಪಿತಪ್ಪಿ ಚಂದ್ರನನ್ನು ನೋಡಿದ್ರೂ ಸುಳ್ಳು ಆಪಾದನೆಗಳು ಬರುತ್ತವೆ.

ಒಮ್ಮೆ ಗಣೇಶನ ಮುಖ ನೋಡಿ ಚಂದ್ರ ಅಪಹಾಸ್ಯ ಮಾಡಿದ್ದನಂತೆ. ಇದ್ರಿಂದ ಕೋಪಗೊಂಡ ಗಣೇಶ, ಚಂದ್ರನಿಗೆ ಶಾಪ ನೀಡಿದ್ದನಂತೆ. ನಿನ್ನನ್ನು ನೋಡಿದವ್ರಿಗೆ ಅವಮಾನವಾಗ್ಲಿ ಎಂದು ಶಾಪ ನೀಡಿದ್ದನಂತೆ.ತಕ್ಷಣ ತಪ್ಪಿನ ಅರಿವಾದ ಚಂದ್ರ,ಗಣೇಶನ ಕ್ಷಮೆ ಕೇಳಿದ್ದನಂತೆ. ಕ್ಷಮೆ ನೀಡಿದ ಗಣೇಶ ವರ್ಷದಲ್ಲಿ ಒಂದು ದಿನ, ಭಾದ್ರಪದ ಶುಕ್ಲ ಮಾಸದ ಚೌತಿಯಂದು ನಿನ್ನನ್ನು ನೋಡಿದವರಿಗೆ ಅವಮಾನವಾಗ್ಲಿ ಎಂದನಂತೆ.

ಒಂದು ವೇಳೆ ಚೌತಿಯಂದು ಚಂದ್ರನನ್ನು ನೋಡಿದ್ರೆ ಪರಿಹಾರಕ್ಕಾಗಿ ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರ ಪಠಣ ಮಾಡಿದ್ರೆ ಯಾವುದೇ ದೋಷ ತಟ್ಟುವುದಿಲ್ಲವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಸಿಂಹಃ ಪ್ರಸೇನಮವಧೀತ್ಸಿಂಹೋ ಜೌಂಬವತಾ ಹತಃ।

ಸುಕುಮಾರಕ ಮಾರೋದಿಃ ತವಹ್ಯೇಷ ಸ್ಯ್ಮಮಂತಕಃ॥

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read