ಭಗವಾನ್ ಶ್ರೀಕೃಷ್ಣ ಹೇಳಿದ ಈ 5 ವಸ್ತುಗಳನ್ನು ಮನೆಯಲ್ಲಿ ಇರಿಸಿದ್ರೆ ಹಣದಿಂದ ಭರ್ತಿಯಾಗುತ್ತದೆ ನಿಮ್ಮ ತಿಜೋರಿ…..!

ಮಹಾಭಾರತದಲ್ಲಿ  ಶ್ರೀಕೃಷ್ಣ ಯುಧಿಷ್ಠಿರನಿಗೆ ಹೇಳಿದ ಬುದ್ಧಿಮಾತುಗಳು ಅಸಂಖ್ಯಾತ ಭಕ್ತರನ್ನು ಸಹ ಯಶಸ್ವಿ ಹಾಗೂ ಬುದ್ಧಿವಂತರನ್ನಾಗಿ ಮಾಡಲು ಪ್ರಯೋಜನಕಾರಿಯಾಗಿವೆ. ಅವುಗಳಲ್ಲಿ ಪ್ರಮುಖವಾದದ್ದು ವಾಸ್ತು ಜ್ಞಾನ. ಭಗವಾನ್ ಶ್ರೀಕೃಷ್ಣನಿಗೆ ವಾಸ್ತು ಶಾಸ್ತ್ರದ ಬಗ್ಗೆ ಸಾಕಷ್ಟು ಜ್ಞಾನವಿತ್ತು. ಮನೆಯಲ್ಲಿ ಇರಿಸಲೇಬೇಕಾದ ಕೆಲವೊಂದು ವಸ್ತುಗಳ ಬಗ್ಗೆ ಕೂಡ ಶ್ರೀಕೃಷ್ಣ ಹೇಳಿದ್ದಾರೆ. ಅವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುವುದಲ್ಲದೆ ಇಡೀ ಪರಿಸರ ಸಂತೋಷದಿಂದ ತುಂಬಿರುವಂತೆ ಮಾಡುತ್ತಾರೆ.

ವಾಸ್ತು ಪ್ರಕಾರ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬಹುದು? ಅವುಗಳನ್ನು ಯಾವ ದಿಕ್ಕಿನಲ್ಲಿ ಇಡುವುದು ಪ್ರಯೋಜನಕಾರಿ ಎಂಬುದನ್ನೆಲ್ಲ ತಿಳಿಯೋಣ.

ದೀಪ, ಧೂಪ, ಶ್ರೀಗಂಧ…

ಭಗವಾನ್ ಶ್ರೀಕೃಷ್ಣನ ಹೇಳಿರುವ ಪ್ರಕಾರ ಮನೆಯಲ್ಲಿ ಧೂಪ, ದೀಪ, ಹೂವುಗಳು ಮತ್ತು ನೈವೇದ್ಯವನ್ನು ಇಡುವುದು ಅಗತ್ಯ ಮತ್ತು ಮಂಗಳಕರ. ಮನೆಯಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಯಾವಾಗಲೂ ಧನಾತ್ಮಕ ಶಕ್ತಿ ಇರುತ್ತದೆ. ಕುಟುಂಬ ಸದಸ್ಯರಲ್ಲಿ ಸಂತೋಷ ಇರುತ್ತದೆ. ಇದಕ್ಕಾಗಿ ಮನೆಯಲ್ಲಿ ಶ್ರೀಗಂಧವನ್ನು ಸಹ ಇಡಬೇಕು.

ತುಪ್ಪದ ದೀಪ ಹಚ್ಚಿ

ಮನೆಯಲ್ಲಿ ತುಪ್ಪದ ದೀಪ ಬೆಳಗುತ್ತಿರಬೇಕು. ಮನೆಯಲ್ಲಿ ತುಪ್ಪ ಖಾಲಿಯಾಗಲು ಬಿಡಬಾರದು ಎಂಬುದು ಶ್ರೀಕೃಷ್ಣ ಹೇಳಿರುವ ಮಾತು. ಇದಲ್ಲದೆ ಮನೆಯಲ್ಲಿ ಜೇನುತುಪ್ಪವನ್ನು ಇಟ್ಟುಕೊಂಡಿರಬೇಕು. ಜೇನುತುಪ್ಪವು ಆತ್ಮವನ್ನು ಶುದ್ಧೀಕರಿಸುವ ವಸ್ತುವಾಗಿದೆ. ಅದಕ್ಕಾಗಿಯೇ ಇದನ್ನು ಪೂಜೆಯಲ್ಲಿ ಬಳಸಬೇಕು.

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ನೀರಿನ ವ್ಯವಸ್ಥೆ ಇರಬೇಕು. ಈ ದಿಕ್ಕನ್ನು ದೇವರು ಮತ್ತು ದೇವತೆಗಳ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡರೆ ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ನೆಲೆಸುತ್ತಾಳೆ.

ಸರಸ್ವತಿ ಪ್ರತಿಮೆ

ಹಿಂದೂ ಧರ್ಮದಲ್ಲಿ ತಾಯಿ ಸರಸ್ವತಿಯನ್ನು ಜ್ಞಾನ ದೇವತೆ ಎಂದು ಕರೆಯಲಾಗುತ್ತದೆ. ಸರಸ್ವತಿ ಪ್ರತಿಮೆಯನ್ನು ಮನೆಯಲ್ಲಿ ಇರಿಸುವುದರಿಂದ ಬುದ್ಧಿವಂತಿಕೆ ಮತ್ತು ಜ್ಞಾನ ವೃದ್ಧಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕೂಡ ಸುಧಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read