ನವಿಲುಗರಿ ಲಾಕರ್ ನಲ್ಲಿಟ್ಟರೆ ಎದುರಾಗಲ್ಲ ʼಆರ್ಥಿಕʼ ಸಮಸ್ಯೆ

ನವಿಲು ವಿಶ್ವದ ಅತ್ಯಂತ ಸುಂದರ ಪಕ್ಷಿ ಎಂದ್ರೆ ತಪ್ಪಾಗಲಾರದು. ನವಿಲು ತನ್ನ ಗರಿಗಳಿಂದಾಗಿ ಇಷ್ಟು ಸುಂದರವಾಗಿದೆ. ಗರಿ ಬಿಚ್ಚಿ ನವಿಲು ನಲಿಯಲು ಶುರುಮಾಡಿದ್ರೆ ನೋಡಲು ಎರಡು ಕಣ್ಣು ಸಾಲದು. ನವಿಲು ಗರಿಗೆ ವಾಸ್ತು ಶಾಸ್ತ್ರದಲ್ಲಿಯೂ ಮಹತ್ವದ ಸ್ಥಾನವಿದೆ.

ನವಿಲು ಗರಿಯನ್ನು ಜೊತೆಯಲ್ಲಿಟ್ಟುಕೊಳ್ಳುವುದರಿಂದ ಕಷ್ಟಗಳು ದೂರವಾಗುತ್ತವೆ. ದೇವಿ ಸರಸ್ವತಿಯ ವಾಹನವಾಗಿರುವ ನವಿಲನ್ನು ಜಪಾನ್, ಥೈಲ್ಯಾಂಡ್, ಚೀನಾದಲ್ಲಿ ಕೂಡ ಪೂಜೆ ಮಾಡ್ತಾರೆ. ಮನೆಯಲ್ಲಿ ನವಿಲು ಗರಿಯನ್ನಿಡುವುದು ಶುಭ ಸಂಕೇತ. ಲಾಕರ್ ನಲ್ಲಿ ಗರಿಯನ್ನಿಡುವುದರಿಂದ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ನವಜಾತ ಶಿಶುವಿನ ತಲೆ ಬಳಿ ಬೆಳ್ಳಿಯ ತಾಯತದಲ್ಲಿ ನವಿಲುಗರಿ ಇಡುವುದರಿಂದ ನಕಾರಾತ್ಮಕ ಶಕ್ತಿಗಳು ಪ್ರಭಾವ ಬೀರುವುದಿಲ್ಲ.

ಕಾಳಸರ್ಪ ಯೋಗದ ಅಶುಭ ಪ್ರಭಾವವನ್ನು ದೂರ ಮಾಡುವ ಶಕ್ತಿ ನವಿಲು ಗರಿಗಿದೆ. ಮನೆಯಲ್ಲಿ ಇದನ್ನು ಇಡುವುದರಿಂದ ಹಾವುಗಳು ಮನೆಯೊಳಗೆ ಪ್ರವೇಶ ಮಾಡುವುದಿಲ್ಲ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read