ನಿಮ್ಮ ಮನಸ್ಥಿತಿಯಲ್ಲಿ ಸಮಸ್ಯೆಯಾದರೆ ಹೀಗೆ ಪರಿಹರಿಸಿಕೊಳ್ಳಿ

ಕೆಲವು ಜನರು ಪ್ರತಿಯೊಂದು ವಿಚಾರಕ್ಕೂ ಕಿರಿಕಿರಿಗೊಳಗಾಗುತ್ತಾರೆ. ಇದರಿಂದ ಅವರ ಸಂಬಂಧಗಳು ಹಾಳಾಗುವ ಸಂಭವವಿದೆ. ಹಾಗೇ ಇದರಿಂದ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದಕ್ಕೆ ಗ್ರಹಗಳು ಕೂಡ ಕಾರಣವಾಗಿದೆಯಂತೆ. ಹಾಗಾಗಿ ನಿಮ್ಮ ಮನಸ್ಥಿತಿ ಕೆಟ್ಟಿದ್ದರೆ ಈ ಕ್ರಮ ಅನುಸರಿಸಿ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಮ್ಮ ಮನಸ್ಥಿತಿ ಕೆಡಲು ಸೂರ್ಯ ಮತ್ತು ಮಂಗಳ ಗ್ರಹಗಳು ಕಾರಣವಾಗಿದೆಯಂತೆ. ಸೂರ್ಯನು ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣವನ್ನು ಸಂಕೇತಿಸುತ್ತಾನಂತೆ. ಹಾಗಾಗಿ ಸೂರ್ಯ ಗ್ರಹ ದುರ್ಬಲವಾಗಿದ್ದರೆ ವ್ಯಕ್ತಿಯಲ್ಲಿ ಆತ್ಮವಿಶ್ವಾಸದ ಕೊರತೆಯಾಗಿ ಆತನಲ್ಲಿ ನಕರಾತ್ಮಕ ಯೋಚನೆಗಳು ಮೂಡುತ್ತದೆಯಂತೆ.

ಹಾಗೇ ಮಂಗಳ ಗ್ರಹ ಧೈರ್ಯ ಮತ್ತು ಶಕ್ತಿ, ಕೋಪದ ಸಂಕೇತವಾಗಿದೆ. ಮಂಗಳನು ದುರ್ಬಲನಾಗಿದ್ದರೆ ವ್ಯಕ್ತಿಯು ಕಿರಿಕಿರಿ, ಕೋಪ, ಚಡಪಡಿಕೆಗೆ ಒಳಗಾಗುತ್ತಾನೆ. ಹಾಗಾಗಿ ನೀವು ಈ ಕೋಪವನ್ನು ನಿಯಂತ್ರಿಸಲು ಬೆಳ್ಳಿಯ ಉಂಗುರ ಅಥವಾ ಮುತ್ತನ್ನು ಧರಿಸಬೇಕು. ಬೆಳ್ಳಿ ಮನಸ್ಸನ್ನು ಶಾಂತವಾಗಿರಿಸುತ್ತದೆಯಂತೆ. ಇದರಿಂದ ಚಂದ್ರನ ಅನುಗ್ರಹವೂ ದೊರೆಯುತ್ತದೆಯಂತೆ. ಹಾಗೇ ವಿಪರೀತ ಕೋಪಕ್ಕೆ ಒಳಗಾಗುವವರು ಹಣೆಗೆ ಶ್ರೀಗಂಧದ ತಿಲಕವನ್ನು ಹಚ್ಚಿಕೊಳ್ಳಿ. ಇದರಿಂದ ಮನಸ್ಸು ಶಾಂತವಾಗುತ್ತದೆಯಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read