ಈ ಪಂಚ ಸೂತ್ರಗಳನ್ನು ಅನುಸರಿಸಿದ್ರೆ ಆರೋಗ್ಯವಾಗಿರುತ್ತೆ ನಿಮ್ಮ ಕಿಡ್ನಿ

1. ಚೆನ್ನಾಗಿ ನೀರು ಕುಡಿಯಿರಿ

ಮಾನವದ ದೇಹದ 60 ಪ್ರತಿಶತಕ್ಕೂ ಹೆಚ್ಚಿನ ಭಾಗ ನೀರಿನಿಂದಲೇ ಮಾಡಲ್ಪಟ್ಟಿದೆ. ಇದರಿಂದಾಗಿ ನಿಮ್ಮ ದೇಹ ಕೆಲಸ ಮಾಡುತ್ತಾ ಇರುವಂತೆ ನೋಡಿಕೊಳ್ಳಲು ಆಗಾಗ ನೀರು ಕುಡಿಯುತ್ತಿರಬೇಕು. ಇದು ಕಿಡ್ನಿಯ ವಿಚಾರಕ್ಕೂ ಅನ್ವಯವಾಗುತ್ತದೆ.

2. ಉಪ್ಪಿನ ಪ್ರಮಾಣದ ಬಗ್ಗೆ ಎಚ್ಚರವಿರಲಿ

ಊಟಕ್ಕೆ ಉಪ್ಪು ರುಚಿ ಕೊಡುತ್ತದೆ ಎನ್ನುವುದು ಸತ್ಯವಾದರೂ ಸೋಡಿಯಂ ಅಧಿಕ ಬಳಕೆಯಿಂದ ಹೈಪರ್‌‌ಟೆನ್ಷನ್‌ ಉಂಟಾಗಿ ಕಿಡ್ನಿ ವೈಫಲ್ಯದ ರಿಸ್ಕ್ ಜೋರಾಗುತ್ತದೆ. ಉಪ್ಪಿನ ಆರೋಗ್ಯಯುತ ಸೇವನೆ ಖಾತ್ರಿಪಡಿಸಲು ಸಂಸ್ಕರಿಸಿದ ಆಹಾರ, ಕರಿದ ಆಹಾರ ಮತ್ತು ಫಾಸ್ಟ್‌ ಫುಡ್‌ಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು.

3. ಮದ್ಯಪಾನ

ಆಲ್ಕೋಹಾಲ್ ಸೇವನೆಯಿಂದ ಲಿವರ್‌, ಹೃದಯ ಸೇರಿದಂತೆ ದೇಹದ ಮಹತ್ವದ ಭಾಗಗಳಿಗೆ ಏನೆಲ್ಲಾ ದುಷ್ಪರಿಣಾಮ ಆಗುತ್ತದೆ ಎಂದು ಚೆನ್ನಾಗಿ ಗೊತ್ತಿರುವ ಸಂಗತಿ. ಮಿತಿ ಮೀರಿದ ಆಲ್ಕೋಹಾಲ್ ಸೇವನೆ ಕಿಡ್ನಿಗಳಿಗೆ ಹಾನಿಯನ್ನೂ ಉಂಟು ಮಾಡಬಲ್ಲದು ಎಂದು ನಿಮಗೆ ಗೊತ್ತೇ ? ಆಲ್ಕೋಹಾಲ್‌ನ ಅಧಿಕ ಸೇವನೆಯಿಂದ ಸಂಭವಿಸುವ ಹೈಪರ್‌ಟೆನ್ಷನ್‌ನಿಂದಾಗಿ ಕಿಡ್ನಿ ವೈಫಲ್ಯದ ಸಾಧ್ಯತೆಗಳು ಅಧಿಕವಾಗುತ್ತವೆ.

4. ಪೇನ್‌ಕಿಲ್ಲರ್‌ಗಳ ಅಧಿಕ ಸೇವನೆ

ಇತ್ತೀಚಿನ ದಿನಗಳಲ್ಲಿ ಪೇನ್‌ಕಿಲ್ಲರ್‌ಗಳ ಸೇವನೆ ಬಹಳ ಸಾಮಾನ್ಯವಾಗಿಬಿಟ್ಟಿದೆ. ಕೆಲವೊಮ್ಮೆ ಇವುಗಳ ಬಳಕೆ ತಪ್ಪಿಸಲು ಸಾಧ್ಯವಿಲ್ಲ ಎಂಬುದು ನಿಜವೇ ಆದರೂ, ಸಾಧ್ಯವಾದಷ್ಟು ಪೇನ್‌ಕಿಲ್ಲರ್‌ಗಳ ಬಳಕೆಯನ್ನು ತಪ್ಪಿಸಲು ನೋಡಬೇಕು.

5. ಧೂಮಪಾನ

ನೀವು ಧೂಮಪಾನಿಯಾಗಿದ್ದಲ್ಲಿ, ಮೊದಲು ಆ ಅಭ್ಯಾಸಕ್ಕೆ ಇತಿಶ್ರೀ ಹಾಡಿಬಿಡಿ. ಧೂಮಪಾನದಿಂದ ಏನೆಲ್ಲಾ ದುಷ್ಪರಿಣಾಮಗಳಾಗುತ್ತವೆ ಎಂದು ಅರಿವಿದ್ದರೂ ಸಹ ಒಂದೇ ಒಂದು ’ಧಮ್’ಗಾಗಿ ಬಹಳ ಮಂದಿ ಹಾತೊರೆಯುವುದನ್ನು ನೋಡಿಯೇ ಇದ್ದೇವೆ. ಧೂಮಪಾನದಿಂದ ಸಂಭವಿಸುವ ಅನೇಕ ರೀತಿಯ ಅನಾರೋಗ್ಯಗಳಲ್ಲಿ ಕಿಡ್ನಿ ಕ್ಯಾನ್ಸರ್‌‌ನ ಸಾಧ್ಯತೆಯು ಒಂದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read