ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ತಿಂದರೆ ಚಳಿಗಾಲದಲ್ಲಿ ಕಾಡುವ ರೋಗಗಳಿಂದ ಇರಬಹುದು ದೂರ….!

ದೇಶಾದ್ಯಂತ ಚಳಿಗಾಲದ ಅಬ್ಬರ ಶುರುವಾಗಿದೆ. ಹಾಗಾಗಿ ಸಹಜವಾಗಿಯೇ ಸಾಂಕ್ರಾಮಿಕ ರೋಗಗಳು, ಶೀತ, ಜ್ವರ, ಕೆಮ್ಮಿನ ಸಮಸ್ಯೆಯೂ ಹೆಚ್ಚಾಗಿದೆ. ಆಸ್ಪತ್ರೆಗಳೆಲ್ಲ ರೋಗಿಗಳಿಂದ ತುಂಬಿ ತುಳುಕಲಾರಂಭಿಸಿವೆ. ಈ ಋತುವಿನಲ್ಲಿ ಸಾಂಕ್ರಾಮಿಕ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ತೇವಾಂಶದಿಂದಾಗಿ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುವುದರಿಂದ ಇದು ಸಂಭವಿಸುತ್ತದೆ. ಅವು ನಮ್ಮ ಹೊಟ್ಟೆಯ ಮೇಲೆ ದಾಳಿ ಮಾಡುತ್ತವೆ ಮತ್ತು ಅಜೀರ್ಣದ ಸಮಸ್ಯೆ ಪ್ರಾರಂಭವಾಗುತ್ತದೆ.

ಈ ಸಮಸ್ಯೆಯು ಬೇಗನೆ ನಿವಾರಣೆಯಾಗುವುದಿಲ್ಲ. ಕ್ರಮೇಣ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಹಾಗಾಗಿ ಕೆಲವು ಹಣ್ಣುಗಳನ್ನು ಚಳಿಗಾಲದಲ್ಲಿ ನಿಯಮಿತವಾಗಿ ಸೇವನೆ ಮಾಡಿದ್ರೆ ಈ ತೊಂದರೆಗಳಿಂದ ದೂರವಿರಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಬೇಕು.

ಕಲ್ಲಂಗಡಿ: ಬೆಳಗ್ಗೆ ದೇಹಕ್ಕೆ ಉತ್ತಮ ಆಹಾರ ಬೇಕು. ಇದರಿಂದ  ದೇಹದ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ತಿನ್ನಬೇಕು. ಇದು ನಿಮ್ಮ ಕರುಳನ್ನು ಶುದ್ಧೀಕರಿಸುತ್ತದೆ ಮತ್ತು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಕಲ್ಲಂಗಡಿ ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.

ಎಳನೀರು ಮತ್ತು ಜೀರಿಗೆ ನೀರು: ಬೆಳಗ್ಗೆ ಎದ್ದ ನಂತರ ಎಳನೀರು ಅಥವಾ ಜೀರಿಗೆ  ನೀರು ಕುಡಿಯಬೇಕು. ಜೀರಿಗೆ ನೀರು ದೇಹದ ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಎಳನೀರು ದೇಹದ ಶಾಖವನ್ನು ಸಹ ಕಡಿಮೆ ಮಾಡುತ್ತದೆ. ಇದಲ್ಲದೆ ನೀವು ಜೇನುತುಪ್ಪವನ್ನು ನೀರಿಗೆ ಹಾಕಿಕೊಂಡು ಕುಡಿಯಬಹುದು. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪಪ್ಪಾಯ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯ ಹಣ್ಣು ತಿನ್ನುವುದರಿಂದ ದೇಹವು ಸಂಪೂರ್ಣವಾಗಿ ನಿರ್ವಿಶೀಕರಣಗೊಳ್ಳುತ್ತದೆ. ಪಪ್ಪಾಯ  ನಿಮ್ಮನ್ನು ದಿನವಿಡೀ ಚೈತನ್ಯದಿಂದ ಇಡುತ್ತದೆ. ಫೈಬರ್ ಅಂಶ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಪಪ್ಪಾಯ ಸೇವನೆಯಿಂದ ಮಲಬದ್ಧತೆ, ಅಜೀರ್ಣ, ಗ್ಯಾಸ್‌  ಮತ್ತು ಕರುಳಿನ ಊತ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read