ʼಮಂಗಳವಾರʼ ಈ ಪುಸ್ತಕ ದಾನ ಮಾಡಿದರೆ ಬಲು ಬೇಗ ದೊರೆಯುತ್ತೆ ಹನುಮಂತನ ಕೃಪೆ

ಪ್ರತಿ ದಿನದ ಹೊಸ ಬೆಳಕಿನ ಜೊತೆ ಹೊಸ ಜೀವನ ಶುರುವಾಗುತ್ತದೆ. ಒಂದು ದಿನ ಖುಷಿಯಿದ್ರೆ ಮತ್ತೊಂದು ದಿನ ದುಃಖ. ಪ್ರತಿದಿನ ಶುಭವಾಗಿರಲೆಂದು ಎಲ್ಲರೂ ಬಯಸ್ತಾರೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಾರೆ. ಆದ್ರೆ ಅನೇಕ ಬಾರಿ ಫಲಕ್ಕಿಂತ ಅಸಫಲರಾಗುವುದೆ ಹೆಚ್ಚು. ಸುಂದರ, ಸುಖ-ಸಂತೋಷಕರ ಜೀವನ ಪಡೆಯಲು ಭಕ್ತಿ ಮಾರ್ಗ ಶ್ರೇಷ್ಠ ಮಾರ್ಗ.

ಎಲ್ಲ ಕಷ್ಟ ಹಾಗೂ ಕ್ಲೇಶಗಳನ್ನು ದೂರ ಮಾಡಲು ಹನುಮಂತನ ಆರಾಧನೆ ಸರ್ವಶ್ರೇಷ್ಠ. ಕಲಿಯುಗದಲ್ಲಿ ಪವನಪುತ್ರ ಹನುಮಂತ ಅತಿ ಬೇಗ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾನೆಂದು ನಂಬಲಾಗಿದೆ. ಈಗ್ಲೂ ಎಲ್ಲೆಲ್ಲಿ ಸುಂದರ ಕಾಂಡವನ್ನು ಓದಲಾಗುತ್ತದೆಯೋ ಅಲ್ಲೆಲ್ಲ ಹನುಮಂತ ಹಾಜರಾಗುತ್ತಾನೆಂದು ನಂಬಲಾಗಿದೆ.

ಇದ್ರ ಜೊತೆಗೆ ಹನುಮಾನ್ ಚಾಲೀಸ್ ಪಠಣ ಮಾಡುವ ಮೂಲಕ ಹನುಮಂತನನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ಹನುಮಾನ್ ಚಾಲೀಸ್ ನಲ್ಲಿರುವ ಪ್ರತಿಯೊಂದು ಶಬ್ಧವೂ ಭಜರಂಗಬಲಿಯ ಕೃಪೆಗೆ ಪಾತ್ರರಾಗಲು ನೆರವಾಗುತ್ತದೆ. ಪ್ರತಿದಿನ ಹನುಮಾನ್ ಚಾಲೀಸ್ ಓದುವ ವ್ಯಕ್ತಿಗೆ ಯಾವುದೇ ಕಷ್ಟ, ದುಃಖ ಬರುವುದಿಲ್ಲವೆಂದು ನಂಬಲಾಗಿದೆ.

ಹನುಮಂತನ ಭಕ್ತರು ಹನುಮಾನ್ ಚಾಲೀಸ್ನ 11 ಪುಸ್ತಕವನ್ನು ಮಂಗಳವಾರ ಭಕ್ತರಿಗೆ ಹಂಚುವ ಮೂಲಕವೂ ಹನುಮಂತನ ಕೃಪೆಗೆ ಪಾತ್ರರಾಗಬಹುದು. ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗೆ ಉಳಿದ ಭಕ್ತರಿಗೂ ಪುಣ್ಯ ಮಾಡಲು ಅವಕಾಶ ನೀಡಿದಂತಾಗುತ್ತದೆ. ನಾವು ನೀಡಿದ ಪುಸ್ತಕವನ್ನು ಎಷ್ಟು ಭಕ್ತರು ಓದುತ್ತಾರೋ ಅಷ್ಟು ಪಟ್ಟು ಪುಣ್ಯ, ಧನ, ಸಂತೋಷ ನಮಗೆ ಪ್ರಾಪ್ತಿಯಾಗುತ್ತೆ ಎಂದು ನಂಬಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read