ಭಾನುವಾರ ಈ ಕೆಲಸ ಮಾಡಿದ್ರೆ ಲಭಿಸುತ್ತೆ ʼಉದ್ಯೋಗʼ

ಈಗಿನ ದಿನಗಳಲ್ಲಿ ದೊಡ್ಡ ದೊಡ್ಡ ಡಿಗ್ರಿ ಪಡೆದ್ರೂ ಯುವಕರಿಗೆ ಉದ್ಯೋಗ ಸಿಗುವುದಿಲ್ಲ. ಕಾರ್ಮಿಕ ಕೆಲಸ ಇರಲಿ, ಉದ್ಯೋಗವಿರಲಿ, ಎಸಿ ರೂಂನಲ್ಲಿ ಕುಳಿತು ಮಾಡುವ ಕೆಲಸವಿರಲಿ ಎಲ್ಲದಕ್ಕೂ ಹಿಂದಿನ ಜನ್ಮದ ನಂಟಿರುತ್ತದೆ. ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯದಿಂದ ಈ ಜನ್ಮದಲ್ಲಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಸರ್ಕಾರಿ ನೌಕರಿ ಪಡೆಯೋದು ಅನೇಕರ ಕನಸು. ಆದ್ರೆ ಎಲ್ಲರಿಗೂ ಇದು ಸಾಧ್ಯವಿಲ್ಲ. ಕೆಲವೊಂದು ಉಪಾಯಗಳನ್ನು ಈ ಜನ್ಮದಲ್ಲಿ ಅನುಸರಿಸಿದ್ರೆ ನಿಮಗೂ ಸರ್ಕಾರಿ ನೌಕರಿ ಸಿಗೋದ್ರಲ್ಲಿ ಎರಡು ಮಾತಿಲ್ಲ.

ಶನಿವಾರ ಮತ್ತು ಮಂಗಳವಾರ ರಾಮ ಭಕ್ತ ಹನುಮಂತನ ದೇವಸ್ಥಾನಕ್ಕೆ ಹೋಗಬೇಕು. ಹನುಮಾನ್ ಚಾಲೀಸ್ ಓದಬೇಕು.

ಸೋಮವಾರ ವೃತ ಮಾಡಿ. ಶಿವನಿಗೆ ಪಂಚಾಮೃತ ಅಭಿಷೇಕ ಮಾಡಿ.

ಮನೆಯಲ್ಲಿ ಸಕ್ಕರೆ ತಿಂದು ಸಂದರ್ಶನಕ್ಕೆ ಹೋಗಿ.

ಸಂದರ್ಶನಕ್ಕೆ ಹೋಗುವ ಮೊದಲು ಬೆಲ್ಲವನ್ನು ಇಟ್ಟುಕೊಂಡು ಹೋಗಿ. ದಾರಿಯಲ್ಲಿ ಸಿಗುವ ಬಿಳಿ ಹಸುವಿಗೆ ಬೆಲ್ಲವನ್ನು ನೀಡಿ.

ಭಾನುವಾರ ಸೂರ್ಯದೇವನ ಕೃಪೆ ಗಳಿಸಲು ಸೂರ್ಯದೇವನ ಆರಾಧನೆ ಮಾಡಿ.

ಬೆಳಿಗ್ಗೆ ಎದ್ದ ತಕ್ಷಣ ಸೂರ್ಯ ನಮಸ್ಕಾರ ಮಾಡಿ. ಹೀಗೆ ಮಾಡುವುದರಿಂದ ಸೂರ್ಯನ ಕೆಟ್ಟ ದೃಷ್ಠಿಯಿಂದ ಮುಕ್ತಿ ಸಿಗುತ್ತದೆ.

ಸೂರ್ಯಾಸ್ತದ ನಂತ್ರ ಸೂರ್ಯನಿಗೆ ಪೂಜೆ ಮಾಡುವುದರಿಂದ ಶನಿಯ ಕೆಟ್ಟ ಪ್ರಭಾವಕ್ಕೆ ಒಳಗಾಗಬೇಕಾಗುತ್ತದೆ.

ಭಾನುವಾರ ಬೆಳಿಗ್ಗೆ ಸೂರ್ಯನ ಮೊದಲ ಕಿರಣಕ್ಕೆ ನಮಸ್ಕಾರ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read