ಪ್ರತಿದಿನ ಮಾಡಿದ್ರೆ ಈ ಕೆಲಸ ಬೆಣ್ಣೆಯಂತೆ ಕರಗುತ್ತೆ ಬೊಜ್ಜು……!

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೊರೊನಾ ವೈರಸ್ ಬಂದ ಮೇಲಂತೂ ಜನರಲ್ಲಿ ಚಟುವಟಿಕೆಯೇ ಕಡಿಮೆಯಾಗಿದೆ. ವರ್ಕ್‌ ಫ್ರಮ್‌ ಹೋಮ್‌ ಇರೋದ್ರಿಂದ ಕುಳಿತೇ ಕೆಲಸ ಮಾಡಿ ಮತ್ತಷ್ಟು ಬೊಜ್ಜು ಬೆಳೆಸುವಂತಾಗಿದೆ.

ವೇಗವಾಗಿ ಏರ್ತಾ ಇರೋ ಈ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಇದಕ್ಕೆ ಸ್ಟ್ರಿಕ್ಟ್‌ ವರ್ಕೌಟ್ ಮತ್ತು ಆರೋಗ್ಯಕರ ಡಯಟ್ ಚಾರ್ಟ್ ಅನ್ನು ಅನುಸರಿಸುವುದು ಅವಶ್ಯಕ. ಕೆಲವೊಂದು ಆಹಾರಗಳನ್ನು ನಿಯಮಿತವಾಗಿ ಸೇವಿಸುತ್ತ ಬಂದರೆ ಹೊಟ್ಟೆ ಮತ್ತು ಸೊಂಟದ ಬೊಜ್ಜು ತಂತಾನೇ ಕರಗಿ ಹೋಗುತ್ತದೆ. ಅಂತಹ ಆಹಾರಗಳು ಯಾವುದು ಅನ್ನೋದನ್ನು ನೋಡೋಣ.

1.ಸೇಬು

ಸೇಬು ಅತ್ಯಂತ ಆರೋಗ್ಯಕರ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಒಂದು ಸೇಬು ತಿನ್ನಿ ವೈದ್ಯರನ್ನು ದೂರವಿಡಿ ಅನ್ನೋ ಮಾತಿದೆ. ಈ ಹಣ್ಣಿನಲ್ಲಿ ಫೈಬರ್‌ ಸಮೃದ್ಧವಾಗಿದೆ. ಸಕ್ಕರೆ ಅಂಶ ಮತ್ತು ಕ್ಯಾಲೋರಿ ಕಡಿಮೆ ಇದೆ. ಅದಕ್ಕಾಗಿಯೇ ಇದು ತೂಕವನ್ನು ಕಳೆದುಕೊಳ್ಳಲು ಉತ್ತಮ ಆಯ್ಕೆಯಾಗಿದೆ.

2. ಅಣಬೆ

ಮಶ್ರೂಮ್ ಅಥವಾ ಅಣಬೆ ದುಬಾರಿ ಆಹಾರ ನಿಜ. ಆದರೆ ಅಣಬೆ ಸೇವನೆಯಿಂದ ತೂಕ ನಷ್ಟ, ಫ್ಯಾಟ್‌ ಬರ್ನಿಂಗ್‌ ಸುಲಭವಾಗುತ್ತದೆ. ಅಣಬೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಣಬೆಯಲ್ಲಿ ಸಾಕಷ್ಟು ಪ್ರೋಟೀನ್ ಇದೆ. ಅಣಬೆಗಳ ಸೇವನೆಯಿಂದ ನಿಮ್ಮ ಚಯಾಪಚಯ ಸುಧಾರಿಸುತ್ತದೆ, ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಕ್ಯಾರೆಟ್‌ 

ಕ್ಯಾರೆಟ್‌ ದೇಹದ ತೂಕವನ್ನು ವೇಗವಾಗಿ ಕಡಿಮೆ ಮಾಡಲು ಬಯಸಿದರೆ, ದೈನಂದಿನ ಆಹಾರದಲ್ಲಿ ಕ್ಯಾರೆಟ್ ಅನ್ನು ಸೇರಿಸಬೇಕು. ಏಕೆಂದರೆ ಇದು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವಾಗಿದೆ. ಕರಗುವ ಮತ್ತು ಕರಗದ ನಾರು ಈ ತರಕಾರಿಯಲ್ಲಿ ಕಂಡುಬರುತ್ತದೆ, ಇದು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

4. ಪಾಪ್‌ ಕಾರ್ನ್‌

ಮನೆಯಲ್ಲಿ ಅಥವಾ ಸಿನಿಮಾ ಹಾಲ್‌ನಲ್ಲಿ ಪಾಪ್‌ಕಾರ್ನ್ ತಿನ್ನದೇ ಇರುವವರು ನಮ್ಮಲ್ಲಿ ಯಾರೂ ಇಲ್ಲ. ಇದು ಫೈಬರ್‌ನ ಸಮೃದ್ಧ ಮೂಲವಾಗಿದ್ದು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಕಡಿಮೆ ಎಣ್ಣೆಯಲ್ಲಿ ಮನೆಯಲ್ಲಿಯೇ ಪಾಪ್ ಕಾರ್ನ್ ತಯಾರಿಸಬಹುದು. ಏಕೆಂದರೆ ಅನೇಕ ಬಾರಿ ಸ್ಯಾಚುರೇಟೆಡ್ ಕೊಬ್ಬನ್ನು ಮಾರುಕಟ್ಟೆಯಲ್ಲಿ ಬಳಸಲಾಗುತ್ತದೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read