ದೆಹಲಿ ಮೆಟ್ರೋವನ್ನು ಸ್ವಚ್ಛವಾಗಿಡುವುದು ಕೇವಲ ಅಧಿಕಾರಿಗಳ ಜವಾಬ್ದಾರಿಯಲ್ಲ, ಅದರಲ್ಲಿ ಪ್ರಯಾಣಿಸುವ ಸಾರ್ವಜನಿಕರ ಕರ್ತವ್ಯವೂ ಆಗಿದೆ. ಆದರೆ, ಇತ್ತೀಚೆಗೆ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪ್ರೀತ್ ವಿಹಾರ್ ಮೆಟ್ರೋ ಸ್ಟೇಷನ್‌ನಲ್ಲಿ ವಾಂತಿ ಮಾಡಿದ್ದಾನೆ. ಈ ದೃಶ್ಯವನ್ನು ಸೆರೆಹಿಡಿದ ವ್ಯಕ್ತಿ, “ತಡೆದುಕೊಳ್ಳಲು ಆಗದಿದ್ರೆ ಯಾಕೆ ಅಷ್ಟೊಂದು ಕುಡೀತೀರಿ?” ಎಂದು ಪ್ರಶ್ನಿಸಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.
ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದು, “ಕುಡಿದ ವ್ಯಕ್ತಿ ಪ್ರೀತ್ ವಿಹಾರ್ ಮೆಟ್ರೋ ಸ್ಟೇಷನ್‌ನಲ್ಲಿ ವಾಂತಿ ಮಾಡಿದ್ದಕ್ಕೆ ಆತನ ಮತ್ತು ವಿಡಿಯೋ ಮಾಡಿದ ವ್ಯಕ್ತಿಯ ನಡುವಿನ ಕಾಲೇಶ್” ಎಂದು ಶೀರ್ಷಿಕೆ ನೀಡಲಾಗಿದೆ.
ನೆಟ್ಟಿಗರ ಪ್ರತಿಕ್ರಿಯೆ:
ಈ ವಿಡಿಯೋಗೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, “ಅವನು ಕುಡಿದಿದ್ದಾನೆ, ಅವನಿಗೆ ಅರ್ಥವಾಗುವುದಿಲ್ಲ” ಎಂದು ಬರೆದಿದ್ದಾರೆ. ಮತ್ತೊಬ್ಬರು, “ದೆಹಲಿ ಮೆಟ್ರೋ ಅಂದ್ರೆ ಕಾಲೇಶನ ಗೂಡು” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಘಟನೆಯನ್ನು ಸೆರೆಹಿಡಿದ ವ್ಯಕ್ತಿಯನ್ನು ಶ್ಲಾಘಿಸಿ, “ಈ ದೇಶದ ಪ್ರತಿಯೊಬ್ಬ ನಾಗರಿಕನಿಂದಲೂ ಇದೇ ನಿರೀಕ್ಷಿಸಲಾಗಿದೆ. ವಿಡಿಯೋ ಮಾಡಿದ ವ್ಯಕ್ತಿಗೆ ಅಭಿನಂದನೆಗಳು” ಎಂದು ಬರೆದಿದ್ದಾರೆ.
Kalesh b/w a Drunk guy and Camera guy over this drunk guy puked at Preet Vihar Metro Station pic.twitter.com/Djx3YQathA
— Ghar Ke Kalesh (@gharkekalesh) April 10, 2025