ವ್ಯಾಪಾರದಲ್ಲಿ ಉನ್ನತಿ ಬಯಸುವವರು ನೀವಾಗಿದ್ದರೆ ಅನುಸರಿಸಿ ಈ ಉಪಾಯ

ವ್ಯಾಪಾರದಲ್ಲಿ ಉನ್ನತಿಯನ್ನು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಅನೇಕ ಬಾರಿ ಎಷ್ಟೇ ಪ್ರಯತ್ನಿಸಿದ್ರೂ ವ್ಯಾಪಾರದಲ್ಲಿ ಯಶಸ್ಸು ಸಿಗೋದಿಲ್ಲ. ವ್ಯಾಪಾರದಲ್ಲಿ ಲಾಭವಾಗೋದಿಲ್ಲ. ಅಂಥ ಸಂದರ್ಭದಲ್ಲಿ ವಾಸ್ತು ಶಾಸ್ತ್ರದಲ್ಲಿ ಹೇಳಿದ ಕೆಲ ಉಪಾಯಗಳನ್ನು ಪಾಲನೆ ಮಾಡ್ಬೇಕು. ಇದ್ರಿಂದ ವ್ಯಾಪಾರದಲ್ಲಿ ನಷ್ಟ ಕಡಿಮೆಯಾಗುವ ಜೊತೆಗೆ ಲಾಭದ ಮೆಟ್ಟಿಲುಗಳನ್ನು ಏರಬಹುದು.

ವ್ಯಾಪಾರದ ಸ್ಥಳದಲ್ಲಿ ಗೋಮತಿ ಚಕ್ರವನ್ನು ಇಡಿ : ವ್ಯಾಪಾರ, ವ್ಯವಹಾರದಲ್ಲಿ ಏಳ್ಗೆ ಕಾಣಬೇಕು ಎನ್ನುವವರು ಗುರುವಾರ  12 ಗೋಮತಿ ಚಕ್ರದ ಮೇಲೆ ತಿಲಕವನ್ನು ಹಚ್ಚಿ ಅವುಗಳನ್ನು ಅಂಗಡಿ  ಅಥವಾ ಕೆಲಸದ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡಿದ್ರೆ ದೀರ್ಘಕಾಲೀನ ನಷ್ಟವನ್ನು ತಪ್ಪಿಸಬಹುದು. ಇದು ಅತ್ಯಂತ ಪ್ರಭಾವಶಾಲಿ ಉಪಾಯವಾಗಿದೆ. ಗೋಮತಿ ಚಕ್ರದಲ್ಲಿ ಲಕ್ಷ್ಮಿ ನೆಲೆ ನಿಂತಿದ್ದಾಳೆ ಎಂದು ನಂಬಲಾಗಿದೆ.

ಉತ್ತರ ದಿಕ್ಕನ್ನು ಹೀಗಿಡಿ : ಕುಬೇರನು ಸಂಪತ್ತಿನ ದೇವರು ಎಂದು ನಂಬಲಾಗಿದೆ. ಹಾಗೆಯೇ ಉತ್ತರದ ದಿಕ್ಕನ್ನು ಕುಬೇರನ ಜಾಗವೆನ್ನಲಾಗುತ್ತದೆ. ಹಾಗಾಗಿ ಕಚೇರಿಯ ಉತ್ತರದ ಜಾಗವನ್ನು ಯಾವಾಗ್ಲೂ ಸ್ವಚ್ಛವಾಗಿಡಬೇಕು. ಅಲ್ಲಿ ಕೊಳಕು, ಕಸವಿರದಂತೆ ನೋಡಿಕೊಳ್ಳಬೇಕು. ಉತ್ತರ ದಿಕ್ಕನ್ನು ಖಾಲಿ ಇಟ್ಟರೆ ಒಳ್ಳೆಯದು. ಅಲ್ಲಿ ಯಾವುದೇ ಸಾಮಾನುಗಳನ್ನು ಇಡಬಾರದು. ಇದ್ರಿಂದ ವ್ಯಾಪಾರದಲ್ಲಿ ಆಗ್ತಿರುವ ನಷ್ಟ ಕಡಿಮೆಯಾಗುತ್ತದೆ.

ವ್ಯಾಪಾರ ವೃದ್ಧಿ ಯಂತ್ರ : ವ್ಯಾಪಾರದಲ್ಲಿ ನಿರಂತರವಾಗಿ ನಷ್ಟವಾಗುತ್ತಿದೆ ಎನ್ನುವವರು ನಷ್ಟವನ್ನು ತಡೆಗಟ್ಟಲು, ಆರ್ಥಿಕ ವೃದ್ಧಿ ಕಾಣಲು, ವ್ಯಾಪಾರ ವೃದ್ಧಿ ಯಂತ್ರವನ್ನು ಪೂಜಿಸಬೇಕು. ಇದನ್ನು ಸ್ಥಾಪಿಸಲು ಭಾನುವಾರ ಅತ್ಯಂತ ಸೂಕ್ತ ದಿನವಾಗಿದೆ. ಇದ್ರ ನಂತ್ರ ಪ್ರತಿ ದಿನ ವ್ಯಾಪಾರ ವೃದ್ಧಿ ಯಂತ್ರವನ್ನು ಪೂಜಿಸಬೇಕು. ಹೀಗೆ ಮಾಡಿದಲ್ಲಿ ನೀವು ಲಾಭ ಕಾಣಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read