ಎಚ್ಚರ: ನಿಮ್ಮ ಫೋನ್‌ ನಲ್ಲಿ ಈ ಸಂಕೇತ ಬಂದರೆ ಕರೆ ʼರೆಕಾರ್ಡ್‌ʼ ಮಾಡಲಾಗುತ್ತಿದೆ ಎಂದರ್ಥ…!

ನಿಮ್ಮ ಫೋನ್ ಕರೆಯನ್ನು ರೆಕಾರ್ಡ್ ಮಾಡರಾಗುತ್ತಿದೆಯಾ ಎಂಬ ಅನುಮಾನ ನಿಮ್ಮಲ್ಲಿದೆಯಾ? ಅದನ್ನು ಪ್ರಶ್ನಿಸದೇ ನೀವು ಸುಲಭವಾಗಿ ತಿಳಿಯಬಹುದು.

ಫೋನ್ ಕರೆ ಮಾಡಿದವರಿಗೆ ಅಥವಾ ಸ್ವೀಕರಿಸುವವರಿಗೆ ತಿಳಿಸದೆ ವ್ಯಕ್ತಿಯ ಕರೆಯನ್ನು ರೆಕಾರ್ಡ್ ಮಾಡುವುದು ಗೌಪ್ಯತೆ ಹಕ್ಕುಗಳ ಉಲ್ಲಂಘನೆಯಾಗಿದೆ. ಆದರೆ ಈ ಕಾನೂನಿನ ನಂತರವೂ ಫೋನ್ ಕರೆ ರೆಕಾರ್ಡಿಂಗ್ ಮಾಡಲಾಗುತ್ತದೆ.

ಇಂತಹ ವೇಳೆ ಗೂಗಲ್ ‘ಈ ಕರೆಯನ್ನು ರೆಕಾರ್ಡ್ ಮಾಡಲಾಗುತ್ತಿದೆ’ ಎಂಬ ಧ್ವನಿ ಸಂದೇಶವನ್ನು ಕಳುಹಿಸುತ್ತದೆ. ನಿಮ್ಮೊಂದಿಗೆ ಮಾತನಾಡುತ್ತಿರುವವರು ಫೋನ್ ರೆಕಾರ್ಡ್ ಬಟನ್ ಒತ್ತಿದಾಗ ಈ ಸಂದೇಶ ಬರಲಿದೆ.

ಇದಲ್ಲದೇ ಅನೇಕ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳ ಸಹಾಯದಿಂದಲೂ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕರೆ ಸಮಯದಲ್ಲಿ ಫೋನ್ ಅನೇಕ ಬಾರಿ ಬೀಪ್ ಆಗುತ್ತದೆ. ಇದರರ್ಥ ನೀವು ಪ್ರತಿಯೊಂದು ಪ್ರತಿಕ್ರಿಯೆಗೆ ಗಮನ ಕೊಡಬೇಕು.

ಇನ್ನೊಂದು ತುದಿಯಲ್ಲಿ ಯಾರಾದರೂ ನಿಮ್ಮ ಕರೆಯನ್ನು ರೆಕಾರ್ಡ್ ಮಾಡುತ್ತಿರುವಾಗ ಅವರು ಸಾಧ್ಯವಾದಷ್ಟು ಕಡಿಮೆ ಮಾತನಾಡಲು ಪ್ರಯತ್ನಿಸುವ ಸಾಧ್ಯತೆಗಳಿವೆ. ಇಲ್ಲಿಯೂ ನೀವು ಜಾಗರೂಕರಾಗಿರಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read