ಬೆಂಗಳೂರು : ಈ ಇಂಜೆಕ್ಷನ್ ಕೊಟ್ಟರೆ ಆತ್ಮಹತ್ಯೆ ಯೋಚನೆ ಬರಲ್ಲ. ಹೌದು. ಆತ್ಮಹತ್ಯೆ ಯೋಚನೆ ತಡೆಯಲು ಹೊಸ ಇಂಜೆಕ್ಷನ್ ಬಂದಿದೆ ವೈದ್ಯರು ಹೊಸ ಸಂಶೋಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಈ ಇಂಜೆಕ್ಷನ್ ಕೊಟ್ಟರೆ ಆತ್ಮಹತ್ಯೆ ಯೋಚನೆ ಬರಲ್ಲ, ಕೊಡಗು ಜಿಲ್ಲಾಸ್ಪತ್ರೆಯಿಂದ ಈಗಾಗಲೇ 10 ಜನರಿಗೆ ಈ ಚಿಕಿತ್ಸೆ ನೀಡಲಾಗಿದೆ. ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಬರುವ ರೋಗಿಗಳನ್ನ ವಿವಿಧ ಮಾನಸಿಕ ಮತ್ತು ದೈಹಿಕ ಪರೀಕ್ಷೆಗೆ ಒಳಪಡಿಸಿದ ನಂತರ ಇಂಜೆಕ್ಷನ್ ನೀಡಲಾಗುತ್ತದೆ.
ಒಮ್ಮೆ ಈ ಇಂಜೆಕ್ಷನ್ ಕೊಟ್ಟರೆ ಮತ್ತೆ ಅವರು ಯಾವತ್ತೂ ಕೂಡ ಆತ್ಮಹತ್ಯೆ ಯೋಚನೆ ಮಾಡುವುದಿಲ್ಲ ಎಂದು ಡಾ.ರೂಪೇಶ್ ಕುಮಾರ್ ಹೇಳಿದ್ದಾರೆ.ಆತ್ಮಹತ್ಯೆಗೆ ಯತ್ನಿಸಿದ ಬಂದವರಿಗೆಲ್ಲಾ ಇಂಜೆಕ್ಷನ್ ಕೊಡಲ್ಲ, ಬದಲಿಗೆ ಅವರಿಗೆ ಪರೀಕ್ಷೆ ಮಾಡಿದ ಬಳಿಕ ಅವರಿಗೆ ಇಂಜೆಕ್ಷನ್ ಅಗತ್ಯವಿದ್ರೆ ಮಾತ್ರ ಅವರಿಗೆ ಗೊತ್ತಾಗದ ಹಾಗೆ ಗ್ಲೂಕೋಸ್ ಮೂಲಕ ಇದನ್ನ ನೀಡಲಾಗುತ್ತದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಬೆಲೆ 15-20 ಸಾವಿರ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತವಾಗಿ ನೀಡಲಾಗುತ್ತದೆಯಂತೆ. ಸದ್ಯ ಮಡಿಕೇರಿ ಜಿಲ್ಲಾಸ್ಪತ್ರೆ ಸೇರಿ ವಿವಿಧ ಕಡೆ ಈ ಇಂಜೆಕ್ಷನ್ ಸಿಗುತ್ತಿದೆ.