ದೇಹದಲ್ಲಿರುವ ಕೊಬ್ಬು ಈ ಬಣ್ಣದ್ದಾಗಿದ್ದರೆ ಅವರೇ ಆರೋಗ್ಯವಂತರು

ದೇಹದಲ್ಲಿ ಸಂಗ್ರಹಣೆಯಾಗುವ ಕೊಬ್ಬಿನ ಅಂಶ ಆರೋಗ್ಯಕ್ಕೆ ಮಾರಕ ಎಂದು ಎಲ್ಲರೂ ತಿಳಿದಿದ್ದಾರೆ. ಕೊಬ್ಬಿನ ಅಂಶ ಜಾಸ್ತಿ ಆದವರು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಾರೆ ಎಂದೂ ಹೇಳಲಾಗುತ್ತೆ.

ಆದರೆ ಸತ್ಯಾಂಶ ಏನಂದ್ರೆ, ನಾವು ತೆಗೆದುಕೊಳ್ಳುವ ಆಹಾರದಲ್ಲಿರುವ ಎಲ್ಲಾ ಕೊಬ್ಬಿನ ಅಂಶಗಳು ದೇಹಕ್ಕೆ ಕೆಟ್ಟದ್ದು ಅಂತಾ ಹೇಳೋಕೆ ಬರಲ್ಲ. ಕೆಲವೊಂದು ಕೊಬ್ಬಿನ ಅಂಶಗಳು ದೇಹದಲ್ಲಿ ಜಾಸ್ತಿ ಇದ್ದರೇನೆ ಒಳ್ಳೆಯದು ಅಂತಾರೆ ಆಹಾರ ತಜ್ಞರು.

ಅಧ್ಯಯನದ ಪ್ರಕಾರ, ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ರೌನ್​ ಫ್ಯಾಟ್​ ಹೊಂದಿರುವವರು ಗಂಭೀರ ಸಮಸ್ಯೆಗಳಿಂದ ಬಳಲುವ ಪ್ರಮಾಣ ತುಂಬಾನೇ ಕಡಿಮೆ. ಆದರೆ ಬಿಳಿ ಕೊಬ್ಬನ್ನ ಹೊಂದಿರುವವರು ಸಾಮಾನ್ಯವಾಗಿ ಮಧುಮೇಹ ಇಲ್ಲವೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುತ್ತಾರೆ.

ಮಕ್ಕಳಲ್ಲಿ ಹೆಚ್ಚಾಗಿ ಈ ಕಂದು ಬಣ್ಣದ ಕೊಬ್ಬಿನ ಅಂಶ ಕಂಡುಬರುತ್ತೆ. ಈ ಕೊಬ್ಬು ದೇಹದಲ್ಲಿನ ಕ್ಯಾಲರಿಯನ್ನ ಕರಗಿಸಲು ಸಹಾಯ ಮಾಡುತ್ತೆ. ಆದರೆ ವಯಸ್ಸಾಗ್ತಾ ಹೋದಂತೆ ಈ ಬ್ರೌನ್​ ಫ್ಯಾಟ್​ನ ಜಾಗವನ್ನ ಬಿಳಿ ಕೊಬ್ಬಿನ ಅಂಶ ತೆಗೆದುಕೊಳ್ಳಲು ಆರಂಭಿಸುತ್ತೆ. ಇಲ್ಲಿಂದ ತೂಕ ಹೆಚ್ಚಾಗುವ ಸಮಸ್ಯೆ ಶುರುವಾಗುತ್ತಾ ಹೋಗುತ್ತೆ.

ಹಾಗಾದ್ರೆ ದೇಹದಲ್ಲಿ ಕಂದು ಬಣ್ಣದ ಕೊಬ್ಬನ್ನ ಉತ್ಪತ್ತಿ ಮಾಡೋಕೆ ಏನು ಮಾಡಬೇಕು ಎಂಬ ಪ್ರಶ್ನೆ ಮೂಡೋದು ಸಹಜ. ಆದರೆ ಈ ಪ್ರಶ್ನೆಗೆ ಇನ್ನೂ ಸಮಂಜಸವಾದ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ವಿಜ್ಞಾನಿಗಳು ಸಂಶೋಧನೆಯನ್ನ ಮುಂದುವರಿಸಿದ್ದು ಮುಂದಿನ ದಿನಗಳಲ್ಲಿ ಈ ಪ್ರಶ್ನೆಗೆ ಸೂಕ್ತ ಉತ್ತರ ಸಿಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read