ಪುರುಷರು ಉಪ್ಪಿನಕಾಯಿ ಜಾಸ್ತಿ ತಿಂದರೆ ತಪ್ಪಿದ್ದಲ್ಲ ಈ ಅಪಾಯ…!

ಬಹುತೇಕರಿಗೆ ಉಪ್ಪಿನಕಾಯಿ ಇಲ್ಲದೆ ಊಟವೇ ರುಚಿಸುವುದಿಲ್ಲ. ಹಾಗಂತ ಉಪ್ಪಿನಕಾಯಿಯನ್ನು ಅತಿಯಾಗಿ ತಿಂದರೆ ಪುರುಷರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಕೆಲವರಂತೂ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ಜೊತೆಗೂ ಸೇವಿಸ್ತಾರೆ.

ಉಪ್ಪಿನಕಾಯಿ ಊಟ ತಿಂಡಿಯ ರುಚಿ ಹೆಚ್ಚಿಸುವುದು ಸುಳ್ಳಲ್ಲ. ಆದ್ರೆ ಉಪ್ಪಿನಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀವು ತಿನ್ನುತ್ತಿದ್ದರೆ ಕೂಡಲೇ ಅದನ್ನು ನಿಲ್ಲಿಸುವುದು ಸೂಕ್ತ. ವಿವಿಧ ಅಧ್ಯಯನಗಳ ಪ್ರಕಾರ ಹೆಚ್ಚು ಉಪ್ಪಿನಕಾಯಿ ತಿನ್ನುವವರಿಗೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ಬರುವ ಅಪಾಯವಿರುತ್ತದೆ. ಉಪ್ಪಿನಕಾಯಿಯಲ್ಲಿ ಉಪ್ಪು ಜಾಸ್ತಿ ಇರುತ್ತದೆ. ಇದನ್ನು ಅತಿಯಾಗಿ ತಿಂದಾಗ ಹೆಚ್ಚಿನ ಉಪ್ಪಿನಂಶದಿಂದಾಗಿ ಅಧಿಕ ರಕ್ತದೊತ್ತಡವಿರುವ ರೋಗಿಗಳಿಗೆ ಅಪಾಯಕಾರಿಯಾಗಬಲ್ಲದು.

ನೀವು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ಉಪ್ಪಿನಕಾಯಿಯಲ್ಲಿ ಸಂರಕ್ಷಕಗಳಿರುತ್ತವೆ. ಅವುಗಳಲ್ಲಿ ಹೆಚ್ಚು ಅಸ್ತಮಿಪ್ರಿಡ್ ಇರುವುದರಿಂದ ಅದು ಕೂಡ ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಸ್ತಮಿಪ್ರಿಡ್ ಎಂಬುದು ಕಾರ್ಬನ್ ಅಂಶವಾಗಿದೆ. ಇದು ನಿಮ್ಮ ಲೈಂಗಿಕ ಜೀವನಕ್ಕೆ ತೊಂದರೆ ಮಾಡುತ್ತದೆ. ಆದ್ದರಿಂದ ಉಪ್ಪಿನಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ.

ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿಯನ್ನು ಮಿತವಾಗಿ ತಿನ್ನಿ. ಏಕೆಂದರೆ ಮಾರುಕಟ್ಟೆಯ ಉಪ್ಪಿನಕಾಯಿಗಳಲ್ಲಿ ರುಚಿ ಹೆಚ್ಚಿಸುವ ಸಲುವಾಗಿ ಹೆಚ್ಚು ಎಣ್ಣೆ ಮತ್ತು ಹೆಚ್ಚಿನ ಮಸಾಲೆಗಳನ್ನು ಬಳಸಲಾಗುತ್ತದೆ, ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚಿನ ಪ್ರಮಾಣದ ಎಣ್ಣೆ ಮತ್ತು ಅದರಲ್ಲಿ ಬಳಸುವ ಮಸಾಲೆಗಳಿಂದ ಕೊಲೆಸ್ಟ್ರಾಲ್ ಮತ್ತು ಇತರ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read