ಗರ್ಭಿಣಿಯರು ವಾಹನ ಚಲಾಯಿಸುವುದು ಅನಿವಾರ್ಯವಾದ್ರೆ ವಹಿಸಿ ಈ ವಿಶೇಷ ಎಚ್ಚರ….!

ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಸಾಮಾನ್ಯರಂತೆ ಓಡಾಡಲು, ಕುಳಿತುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಗರ್ಭಿಣಿಯರಿಗೆ ವಾಹನ ಚಲಾಯಿಸುವುದು ಅನಿವಾರ್ಯವಾದ್ರೆ ಕೆಲವೊಂದು ವಿಶೇಷ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ.

ಆರಂಭಿಕ ದಿನಗಳಲ್ಲಿ, ಕಾರಿನಲ್ಲಿ ಕುಳಿತುಕೊಳ್ಳುವುದ್ರಿಂದ ಹಿಡಿದು, ಸೀಟ್ ಬೆಲ್ಟ್ ಧರಿಸುವವರೆಗೆ ಎಲ್ಲವನ್ನು ಎಚ್ಚರಿಕೆಯಿಂದ ಮಾಡಬೇಕು.

ದೂರದ ಪ್ರಯಾಣ : ಮೊದಲನೆಯದಾಗಿ ಗರ್ಭಿಣಿಯರು ದೂರದ ಪ್ರಯಾಣ ಬೆಳೆಸದಿರುವುದು ಒಳ್ಳೆಯದು. ಹೆರಿಗೆ ದಿನಾಂಕ ಹತ್ತಿರ ಬಂದಾಗ ಹಾಗೂ ಗರ್ಭ ಧರಿಸಿದ ಆರಂಭಿಕ ದಿನಗಳಲ್ಲಿ, ಕಾರನ್ನು ಬಹುದೂರ ಚಲಾಯಿಸುವುದು ಒಳ್ಳೆಯದಲ್ಲ.

ಸೀಟ್ ಬೆಲ್ಟ್ :  ಗರ್ಭಿಣಿಯರು ಕಾರು ಚಾಲನೆ ಮಾಡುವಾಗ ಅಥವಾ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವಾಗ ಸರಿಯಾಗಿ ಸೀಟ್ ಬೆಲ್ಟ್ ಧರಿಸುವುದು ಬಹಳ ಮುಖ್ಯ. ಸೀಟ್ ಬೆಲ್ಟ್ ಧರಿಸುವಾಗ, ಬೆಲ್ಟ್ ಹೊಟ್ಟೆಯ ಕೆಳಗೆ ಇರಬೇಕು. ಭುಜದ ಮೂಲಕ ಹಾದುಹೋಗುವ ಸೀಟ್ ಬೆಲ್ಟ್  ಎದೆಯ ನಡುವೆ ಇಡಬೇಕು.

ಸೊಂಟಕ್ಕೆ ಬೆಂಬಲ: ಗರ್ಭಿಣಿಯರಿಗೆ ಸೊಂಟದ ನೋವು ಮಾಮೂಲಿ. ಕಾರು ಚಾಲನೆ ಮಾಡುವಾಗ, ಸೊಂಟಕ್ಕೆ ಬೆಂಬಲ ಸಿಗಲು ದಿಂಬನ್ನು ಹಾಕಿಕೊಳ್ಳಬೇಕು. ಯಾವಾಗಲೂ ಕಾರಿನಲ್ಲಿ ದಿಂಬು ಇರುವುದು ಸೂಕ್ತ.

ರಸ್ತೆ : ಗರ್ಭಿಣಿಯರು ಹೆಚ್ಚು ಪರಿಶ್ರಮ ತೆಗೆದುಕೊಳ್ಳಬಾರದು. ಸರಿಯಾದ ರಸ್ತೆಯಲ್ಲಿ ಮಾತ್ರ ಕಾರು ಚಾಲನೆ ಮಾಡುವುದು ಸೂಕ್ತ. ಹಳ್ಳಗಳಿರುವ ರಸ್ತೆ ಅಥವಾ ಕಿರಿದಾದ, ಅಂಕು-ಡೊಂಕಿನ ರಸ್ತೆಯಲ್ಲಿ ಕಾರು ಚಲಾಯಿಸಬೇಡಿ. ಪದೇ ಪದೇ ಬ್ರೇಕ್ ಹಾಕಿದ್ರೆ ಹೊಟ್ಟೆ ನೋವು ಬರುವ ಸಾಧ್ಯತೆಯಿರುತ್ತೆ.

ಹೊಟ್ಟೆಗೆ ಒತ್ತಡ :  ಚಾಲನೆ ಮಾಡುವಾಗ ಹೊಟ್ಟೆಯ ಮೇಲೆ ಯಾವುದೇ ಒತ್ತಡವಿರದಂತೆ ನೋಡಿಕೊಳ್ಳಿ. ಸ್ಟೀರಿಂಗ್ ನಿಂದ ದೂರವಿರಲು ಪ್ರಯತ್ನಿಸಿ. ಅನುಕೂಲಕ್ಕೆ ತಕ್ಕಂತೆ ಸೀಟನ್ನು ಸರಿಮಾಡಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read