ಭಾರತದಲ್ಲಿ, ಯಾವುದೇ ದೊಡ್ಡ ಆಚರಣೆ ಅಥವಾ ಸಮಾರಂಭದಲ್ಲಿ ಆಹಾರವು ಪ್ರಮುಖ ಭಾಗವಾಗಿದೆ. ವಿವಿಧ ರೀತಿಯ ಭಕ್ಷ್ಯಗಳು ಇರುತ್ತವೆ. ಬರುವ ಅತಿಥಿಗಳು ತಮ್ಮ ತಟ್ಟೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನವುಗಳನ್ನು ಹಾಕಿಕೊಂಡು ಅದನ್ನು ಬಿಡುವುದು ಮಾಮೂಲಾಗಿದೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಇತ್ತೀಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಮೇಜಿನ ಮೇಲೆ ಅರ್ಧ ತಿಂದ ಆಹಾರದ ಪ್ಲೇಟ್‌ಗಳನ್ನು ರಾಶಿ ಹಾಕಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಇಂಥ ಜನರನ್ನು ಯಾವುದೇ ಸಮಾರಂಭಕ್ಕೆ ಹಾಜರಾಗದಂತೆ ನಿಷೇಧಿಸಬೇಕು ಎಂದು ನೋವಿನಿಂದ ಅವರು ನುಡಿದಿದ್ದಾರೆ.
ಈ ಟ್ವೀಟ್ ಶೀಘ್ರದಲ್ಲೇ ಸಾವಿರಾರು ಲೈಕ್‌ಗಳನ್ನು ಸಂಗ್ರಹಿಸಿದೆ. ಆಹಾರವನ್ನು ವ್ಯರ್ಥ ಮಾಡುವ ಅಭ್ಯಾಸದ ಕುರಿತು ಹಲವಾರು ಮಂದಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರವನ್ನು ಬಿಡುವುದು ಫ್ಯಾಷನ್ ಆಗಿದೆ. ಅಷ್ಟೂ ಆಹಾರ ತಿಂದರೆ ಜನರು ಏನನ್ನುತ್ತಾರೋ ಎನ್ನುವ ಮನೋಭಾವದಿಂದಲೂ ಈ ರೀತಿ ಆಹಾರ ವ್ಯರ್ಥವಾಗುತ್ತಿದೆ ಎಂದು ಹಲವರು ಹೇಳಿದ್ದಾರೆ.
https://twitter.com/AwanishSharan/status/1621159699109535747?ref_src=twsrc%5Etfw%7Ctwcamp%5Etweetembed%7Ctwterm%5E1621159699109535747%7Ctwgr%5Eca93818cb55dc77b3e9857b1d3a9002b8c15e391%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fias-officer-prompts-conversation-on-food-waste-8427067%2F