ಹಲವು ವರ್ಷಗಳಿಂದ ಒಂದಲ್ಲ ಒಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿರುವ ನಟಿ ವಿಜಯಲಕ್ಷ್ಮಿಯ ವಿಡಿಯೋವೊಂದು ಆತಂಕ ಸೃಷ್ಟಿಸಿದೆ.
2 ದಿನದೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ನಟಿ ವಿಜಯಲಕ್ಷ್ಮಿ ವಿಡಿಯೋ ಮೂಲಕ ಹೇಳಿದ್ದು, ನಂತರ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸೂರ್ಯವಂಶ, ನಾಗಮಂಡಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸಿನಿರಸಿಕರ ಮನ ಗೆದ್ದ ನಟಿ ವಿಜಯಲಕ್ಷ್ಮಿ ಪರಭಾಷೆಯ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಅವರು ನಾಮ್ ತಮಿಳರ್ ಪಾರ್ಟಿಯ ಸೀಮಾನ್ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ಇದು ನಿಜವಾಗಿಯೂ ನನ್ನ ಕೊನೆಯ ವೀಡಿಯೊ! ಸೀಮನ್ ಯಾರು ಎಂಬುದನ್ನು ನನ್ನ ಸಾವು ನಿಮಗೆ ತಿಳಿಸುತ್ತದೆ… ಎಲ್ಲರಿಗೂ ಧನ್ಯವಾದಗಳು!” ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
https://twitter.com/reflectnewstn/status/1764961956946162069?ref_src=twsrc%5Etfw%7Ctwcamp%5Etweetembed%7Ctwterm%5E1764961956946162069%7Ctwgr%5E8ce33f5d160c4335e629dcfc8cf39fd0d6a4be04%7Ctwcon%5Es1_&ref_url=https%3A%2F%2Fkannada.news18.com%2Fnews%2Fentertainment%2Factress-vijayalakshmi-posted-a-video-saying-that-she-will-commit-suicide-pvn-1598911.html