ತಿಂಗಳಿಗೆ 50 ಸಾವಿರ ಗಳಿಸುವ ಡಿಲಿವರಿ ಬಾಯ್; ವೈರಲ್‌ ವಿಡಿಯೋ ನೋಡಿ ದಂಗಾದ ಜನ…..!

ಐಟಿ ಉದ್ಯೋಗಿಗಳಿಗಿರುವಷ್ಟು ಮಹತ್ವ ಡಿಲಿವರಿ ಬಾಯ್‌ ಗಳಿಗಿಲ್ಲ. ಆದ್ರೆ ಐಟಿ ಉದ್ಯೋಗಿಗಳಿಗಿಂತ ಡಿಲಿವರಿ ಬಾಯ್ಸ್‌ ಹೆಚ್ಚು ಗಳಿಸ್ತಾರೆ ಅನ್ನೋದು ಅನೇಕರಿಗೆ ತಿಳಿದಿಲ್ಲ. ಫುಲ್‌ ಡಿಸ್‌ ಕ್ಲೋಸರ್‌ ಹೆಸರಿನ ಯುಟ್ಯೂಬ್‌ ಚಾನೆಲ್‌ ನಡೆಸುತ್ತಿರುವ ಲವೀನಾ ಕಾಮತ್‌, ಡಿಲಿವರಿ ಬಾಯ್ಸ್‌ ಎಷ್ಟು ಆದಾಯ ಗಳಿಸ್ತಾರೆ ಎಂಬ ಸತ್ಯವನ್ನು ಬಿಚ್ಚಿಟ್ಟು ಎಲ್ಲರನ್ನು ಆಘಾತಗೊಳಿಸಿದ್ದಾರೆ.

ಅವರ ಹೊಸ ವಿಡಿಯೋದಲ್ಲಿ ಬೆಂಗಳೂರಿನ ಸ್ವಿಗ್ಗಿ ಮತ್ತು ಜೊಮಾಟೊ ಡೆಲಿವರಿ ಏಜೆಂಟ್‌ಗಳ ಗಳಿಕೆ ಗಮನಾರ್ಹ ಆಸಕ್ತಿಯನ್ನು ಹುಟ್ಟುಹಾಕಿದೆ. ಕಾಮತ್,  ಸ್ವಿಗ್ಗಿಯ 22 ವರ್ಷದ ಡೆಲಿವರಿ ಏಜೆಂಟ್ ಶಿವ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಿವ, ಮಾಸಿಕ 40,000 ರಿಂದ 50,000 ರೂಪಾಯಿ ಗಳಿಸೋದಾಗಿ ಹೇಳಿದ್ದಾರೆ. ಮೂರು ವರ್ಷಗಳಿಂದ ಇಲ್ಲಿ ಕೆಲಸ ಮಾಡ್ತಿರುವ ಶಿವ, ಪ್ರತಿ ಫುಡ್ ಆರ್ಡರ್‌ಗೆ 20 ಮೂಲ ವೇತನ ಪಡೆಯುತ್ತಾರೆ. ಟಿಪ್ಸ್ ಮೂಲಕ ಅವರಿಗೆ ತಿಂಗಳಿಗೆ 5,000 ರೂಪಾಯಿ ಸಿಗುತ್ತದೆ. ಕಳೆದ ಆರು ತಿಂಗಳಿಂದ 2 ಲಕ್ಷ ರೂಪಾಯಿ ಉಳಿತಾಯ ಮಾಡುವ ಪ್ರಯತ್ನ ನಡೆಸುತ್ತಿರುವ ಶಿವ, ಹಳ್ಳಿಯಲ್ಲಿ ಸ್ವಂತ ಉದ್ಯೋಗ ಶುರು ಮಾಡುವ ಕನಸು ಹೊಂದಿದ್ದಾರೆ.

ಕಾಮತ್‌ ಇದೇ ವೇಳೆ ಝೊಮಾಟೊದ ಡೆಲಿವರಿ ಬಾಯ್‌ ಮಾತನಾಡಿಸಿದ್ದು, ಆತ ಕೂಡ ಮಾಸಿಕ 40,000 ರೂಪಾಯಿ ಗಳಿಸೋದಾಗಿ ಹೇಳಿದ್ದಾರೆ. ಇಷ್ಟು ಹಣ ಸಂಪಾದನೆ ಮಾಡಲು ಅವರು 12 – 13 ಗಂಟೆ ಕೆಲಸ ಮಾಡುತ್ತಾರೆ. ಕಾಮತ್ ಅವರ ವೀಡಿಯೊ, ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read