‘ನಾನು ಈ ಸ್ಥಾನದಲ್ಲಿದ್ದೇನೆ ಅಂದ್ರೆ ಟ್ರೋಲರ್ ಗಳೇ ಕಾರಣ’ : ಸ್ಪೀಕರ್ ಯು.ಟಿ ಖಾದರ್

ಬೆಂಗಳೂರು : ಯಾವ ಟ್ರೋಲ್ ಗೂ ತಲೆಕೆಡಿಸಿಕೊಳ್ಳಬೇಡಿ, ಅವರಿಂದಲೇ ನಾವು ಬೆಳೆಯೋದು. ನಾನು ಈ ಸ್ಥಾನದಲ್ಲಿದ್ದೇನೆ ಅಂದ್ರೆ ಅದಕ್ಕೆ ಟ್ರೋಲರ್ ಗಳೇ ಕಾರಣ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ  ಸ್ಪೀಕರ್​ U.T.ಖಾದರ್​ ಪ್ರೋತ್ಸಾಹ ನೀಡಿದ ಘಟನೆ ನಡೆಯಿತು. ಅಧಿವೇಶನದಲ್ಲಿ ಹೊಸ ಶಾಸಕರು ಆತ್ಮವಿಶ್ವಾಸದಿಂದ, ಸಂವಿಧಾನ ಬದ್ಧವಾಗಿ ಮಾತನಾಡಿ ಅಷ್ಟೇ ಎಂದರು.​ ಇದು ಪರೀಕ್ಷೆ ಅಥವಾ ನ್ಯಾಯಾಲಯ ಅಲ್ಲ, ಫ್ರೀ ಆಗಿ ಮಾತನಾಡಿ ಎಂದರು.ಇಂದು ವಿಧಾನಸೌಧದಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್ ಶಾಸಕರಿಗೆ ಕಿವಿಮಾತು ಹೇಳಿದರು. ಟ್ರೋಲ್ ಮಾಡುವವರು ಇದ್ದೇ ಇರ್ತಾರೆ, ಅವರಿಂದಲೇ ನಾವು ಬೆಳೆಯೋದು. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು ಎಂದರು.ಮೊದಲ ಬಾರಿಗೆ ಶಾಸಕ  ಆಗಿ ಆಯ್ಕೆಯಾದವರಿಗೆ ಟ್ರೋಲ್ ಭಯ ಇರುತ್ತದೆ. ದೊಡ್ಡ ಸ್ಥಾನಕ್ಕೆ ಹೋಗಬೇಕೆಂದರೆ ಅದಕ್ಕೆ ಟ್ರೋಲ್ ಮಾಡುವವರೇ ಕಾರಣ ಎಂದರು.

ಇತ್ತೀಚೆಗೆ ಖಾದರ್ ಅವರನ್ನು ಕೂಡ ಟ್ರೋಲ್ ಮಾಡಲಾಗಿತ್ತು,  ಸ್ಪೀಕರ್ ಯು.ಟಿ ಖಾದರ್ ಕನ್ನಡ ಭಾಷೆ ಅರ್ಥ ಆಗುತ್ತಿಲ್ಲ ಎಂದು ಬಿಜೆಪಿಗರು ಸನದಲ್ಲಿ ಕಾಲೆಳೆದಿದ್ದರು. ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಯುಟಿ ಖಾದರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ನನ್ನ ಕನ್ನಡ ಹೆಚ್ಚು ಕಡಿಮೆ ಇರಬಹುದು. ಆದರೆ ಅದು ನಮ್ಮ ಪ್ರೀತಿಯ ಭಾಷೆ. ಪ್ರೀತಿ, ಸೋದರತೆ ಸಾಮರಸ್ಯದ ಭಾಷೆ ಎಂದು ಟ್ರೋಲರ್ ಗಳಿಗೆ ಇತ್ತೀಚೆಗೆ ಖಾದರ್ ಖಡಕ್ ಉತ್ತರ ನೀಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read