ಹೈದರಾಬಾದ್-ವಿಜಯಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಇಲಿಗಳ ಕಾಟ; ರೈಲ್ವೆ ಅಧಿಕಾರಿಗಳ ವಿರುದ್ಧ ಪ್ರಯಾಣಿಕರ ಆಕ್ರೋಶ

ವಿಜಯಪುರ: ರೈಲಿನ ಜನರಲ್ ಬೋಗಿಗಳಲ್ಲಿ ಸೊಳ್ಳೆ, ಜಿರಳೆ ಕಾಟ, ಶೌಚಾಲಯದ ದುರ್ನಾಥವಿರುವುದು ಸಾಮಾನ್ಯ. ಹಲವು ಬಾರಿ ಈ ಬಗ್ಗೆ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಉಂಟು. ಆದರೆ ಬಹುತೇಕ ರೈಲುಗಳಲ್ಲಿ ಸಿಬ್ಬಂದಿಗಳು ಸ್ವಚ್ಛತೆ ಬಗ್ಗೆ ನಿರ್ಲಕ್ಷ ವಹಿಸುವುದು ಮುಂದುವರೆದಿದೆ.

ಇದೀಗ ಹೈದರಾಬಾದ್-ವಿಜಯಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಸೊಳ್ಳೆ, ಜಿರಳೆ ಜೊತೆ ಇಲಿಗಳ ಕಾಟ ಜೋರಾಗಿದೆ. ಜನರಲ್ ಬೋಗಿಗಳನ್ನು ಸ್ವಚ್ಚವಾಗಿ ಇಡದ ಕಾರಣ ಇಲಿಗಳ ವಾಸಸ್ಥಾನವಾಗಿವೆ.

ಹೈದರಾಬಾದ್-ವಿಜಯಪುರ ಎಕ್ಸ್ ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಕರು ಕಾಲಿಟ್ಟಲ್ಲೆಲ್ಲ ಇಲಿಗಳದ್ದೇ ಕಾರುಬಾರು. ಎಲ್ಲೆಂದರಲ್ಲಿ ಇಲಿಗಳು ಕಂಡುಬರುತ್ತಿವೆ. ಇದರಿಂದ ಪ್ರಯಾಣಿಕರು ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರು ಬ್ಯಾಗ್, ಇತರೆ ಚೀಲಗಳನ್ನು ಇಟ್ಟರೆ ನಿಲ್ದಾಣ ಬಂದು ಇಳಿಯುವಷ್ಟರಲ್ಲಿ ಇಲಿಗಳು ಬ್ಯಾಗ್ ಗಳನ್ನು ಕಚ್ಚಿ ಚಿಂದಿ ಮಾಡುತ್ತಿವೆ. ರೈಲ್ವೆ ಬೋಗಿಗಳನ್ನು ಸ್ವಚ್ಛಗೊಳಿಸಿ ಸುರಕ್ಷಿತ ಪ್ರಯಾಣ ಕಲ್ಪಿಸುವಂತೆ ಅಧಿಕಾರಿಗಳಿಗೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read