ಚಲಿಸುತ್ತಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ; ಸಹಾಯ ಮಾಡುವ ನೆಪದಲ್ಲಿ ಹೀನ ಕೃತ್ಯ

ರಾತ್ರಿ ಪ್ರಯಾಣದ ವೇಳೆ ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಬಸ್ ನಲ್ಲಿ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಸೆಪ್ಟೆಂಬರ್ 18 ರಂದು ಯುವಕನೊಬ್ಬ ಈ ಕೃತ್ಯವೆಸಗಿರುವ ಆರೋಪ ಇದೆ.

ಸಂತ್ರಸ್ತೆ ಕುಕಟ್ಪಲ್ಲಿಯಿಂದ ಬಸ್ ಹತ್ತಿ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಗುರುತಿಸಿದ ಆರೋಪಿ 27 ವರ್ಷದ ಸಾಯಿ ಕುಮಾರ್ ರೆಡ್ಡಿ, ಬಸ್ ಗೆ ಇನ್ನೂ ಹೆಚ್ಚಿನ ಜನ ಹತ್ತಿಕೊಳ್ಳಲಿದ್ದಾರೆ. ಇದರಿಂದ ನಿಮಗೆ ತೊಂದರೆಯಾಗುತ್ತದೆ. ಹಾಗಾಗಿ ನೀವು ಹಿಂದಿನ ಸೀಟಿಗೆ ಹೋಗಿ ಎಂದು ಸಲಹೆ ನೀಡಿ ಆಕೆಯನ್ನು ಬಸ್ಸಿನ ಹಿಂಬದಿಯ ಆಸನಕ್ಕೆ ಕಳುಹಿಸಿದ್ದಾನೆ. ಎಲ್ಲಾ ಪ್ರಯಾಣಿಕರು ಮಲಗಿದ ನಂತರ ಮಹಿಳೆಯ ಬಾಯಿಯನ್ನು ಮುಚ್ಚಿ ಅತ್ಯಾಚಾರವೆಸಗಿದ್ದಾನೆ ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ ಆರೋಪಿಯು ಆಕೆಗೆ ಈ ಬಗ್ಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಸಂತ್ರಸ್ತೆ ಸೆಪ್ಟೆಂಬರ್ 21 ರಂದು ಚೌಟುಪ್ಪಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪ್ರಕರಣವನ್ನು ಕುಕಟ್‌ಪಲ್ಲಿ ಪೊಲೀಸರಿಗೆ ವರ್ಗಾಯಿಸಲಾಗಿದೆ.

ಸಂತ್ರಸ್ತೆ ದೂರಿನ ಮೇರೆಗೆ ಕುಕಟ್ ಪಲ್ಲಿ ಪೊಲೀಸರು ಸಾಯಿಕುಮಾರ್ ರೆಡ್ಡಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read