ATM ಗೆ ಹೋಗುವ ಗ್ರಾಹಕರು ನೋಡಲೇಬೇಕು ಬೆಚ್ಚಿಬೀಳಿಸುವ ಈ ವಿಡಿಯೋ…!

ಗ್ರಾಹಕರೇ…… ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಇಲ್ಲಾ, ಠೇವಣಿ ಮಾಡುವ ಮುನ್ನ ಹುಷಾರ್..! ಯಾವ ಕ್ಷಣದಲ್ಲಾದರೂ ಖದೀಮರು ಬಂದು ನಿಮ್ಮ ಹಣವನ್ನ ದೋಚಿಕೊಂಡು ಹೋಗಿ ಬಿಡುತ್ತಾರೆ. ಅದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ.

ಹೈದ್ರಾಬಾದ್​​ನ ಪಂಜಾಬ್ ನ್ಯಾಶನಲ್ ಬ್ಯಾಂಕ್ ಎಟಿಎಂನಲ್ಲಿ, ವ್ಯಕ್ತಿಯೊಬ್ಬರು ಹಣವನ್ನ ಠೇವಣಿ ಇಡುವುದಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಇಬ್ಬರು ಅನಾಮಿಕರು ಹಿಂದಿನಿಂದ ಹೋಗಿ, ಠೇವಣಿ ಇಡುವುದಕ್ಕೆ ಹೋಗಿದ್ದ ವ್ಯಕ್ತಿಯ ಮೇಲೆ ಪೆಪ್ಪರ್ ಸ್ಪ್ರೆ ಮಾಡಿದ್ದಾರೆ. ಕೊನೆಗೆ ಆ ವ್ಯಕ್ತಿಯ ಕೈಯಲ್ಲಿದ್ದ 7 ಲಕ್ಷ ಹಣವನ್ನ ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ. ಆ ಸಮಯದಲ್ಲಿ ಕಳ್ಳರ ಹಾಗೂ ಗ್ರಾಹಕನ ನಡುವೆ ಜಟಾಪಟಿ ನಡೆದಿದೆ. ಈ ಘಟನೆಯು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗ್ರಾಹಕನನ್ನ ದೋಚಿದ ಆ ಇಬ್ಬರು ವ್ಯಕ್ತಿಗಳಲ್ಲಿ ಓರ್ವ ಮಾಸ್ಕ್ ಹಾಕಿಕೊಂಡಿದ್ದು, ಇನ್ನೊಬ್ಬ ಮುಖವೇ ಕಾಣಿಸದಂತೆ ಹೆಲ್ಮೆಟ್ ಹಾಕಿಕೊಂಡು ಬಂದಿರುವುದು, ಈ ಸಿಸಿ ಟಿವಿಯ ಈ ದೃಶ್ಯದಲ್ಲಿ ಗಮನಿಸಬಹುದು. ಅಷ್ಟೆ ಅಲ್ಲ ಈ ಇಬ್ಬರು ಲೂಟಿಕೋರರಿಗೆ ಇನ್ನೂ ಇಬ್ಬರು ಸಾಥ್ ಕೊಟ್ಟಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ನಾಲ್ವರನ್ನೂ ಬಂಧಿಸಿದ್ದಾರೆ. ಹಾಗೂ ಅವರು ಈ ಲೂಟಿ ಕಾರ್ಯಕ್ಕೆ ಬಳಸಿರುವ ಒಂದು ಕಾರು ಹಾಗೂ ಒಂದು ಬೈಕ್ ಕೂಡ ಪೊಲೀಸರು ವಶಪಡಿಸಿಕೊಂಡಿದ್ಧಾರೆ.

https://twitter.com/ANI/status/1680217397670862851?ref_src=twsrc%5Etfw%7Ctwcamp%5Etweetembed%7Ctwterm%5E1680217397670862851%7Ctwgr%5E7db6c9f6bc5c36b85bc123e7ad1e2460ef7ff4d1%7Ctwcon%5Es1_&ref_url=https%3A%2F%2Fwww.hindustantimes.com%2Fcities%2Fhyderabad-atm-robbery-pepper-spray-used-attack-man-steal-rs-7-lakh-101689475153853.html

https://twitter.com/ANI/status/1680203628186066948?ref_src=twsrc%5Etfw%7Ctwcamp%5Etweetembed%7Ctwterm%5E1680217397670862851%7Ctwgr%5E607c7edb15f6e32fdf7303ba20186ec61474b418%7Ctwcon%5Es2_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fhyderabadpeppersprayineyesmanbeatenuprobbedofrs7lakhatatm4heldwatch-newsid-n518856726

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read