ಹೈದರಾಬಾದಿನಲ್ಲೊಂದು ಭೀಕರ ಘಟನೆ: ಪ್ರಿಯತಮೆ ಜೊತೆ ಮಾತನಾಡಿದ್ದಕ್ಕೆ ಗೆಳೆಯನನ್ನು ಕೊಂದು ಹೃದಯವನ್ನೇ ಹೊರ ತೆಗೆದ ಯುವಕ

ತನ್ನ ಪ್ರಿಯತಮೆ ಜೊತೆ ಮಾತನಾಡುವುದರ ಜೊತೆಗೆ ಆಕೆಗೆ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಯುವಕ, ತನ್ನ ಸ್ನೇಹಿತನ ತಲೆಕಡಿದು ಕೊಲೆ ಮಾಡಿದ್ದಲ್ಲದೆ, ಹೃದಯವನ್ನೂ ಹೊರ ತೆಗೆದಿದ್ದಾನೆ. ಅಷ್ಟೇ ಅಲ್ಲ ಆತನ ಖಾಸಗಿ ಅಂಗಗಳನ್ನು ತುಂಡರಿಸಿ ಶವದ ಜೊತೆ ಫೋಟೋ ತೆಗೆದು ತನ್ನ ಗೆಳತಿಗೆ ಕಳುಹಿಸಿದ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಇಂತಹದೊಂದು ಭೀಕರ ಘಟನೆ ಹೈದರಾಬಾದಿನಲ್ಲಿ ನಡೆದಿದ್ದು, ಹರಿಹರ ಕೃಷ್ಣ ಎಂಬಾತ ತನ್ನ ಸ್ನೇಹಿತ ನವೀನ್ ನನ್ನು ಕೊಲೆ ಮಾಡಿದ್ದಾನೆ. ನವೀನ್, ಹರಿಹರ ಕೃಷ್ಣ ಹಾಗೂ ಹಾಗೂ ಇವರಿಬ್ಬರ ಗೆಳತಿ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆ ಮೊದಲು ನವೀನ್ ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ನಂತರ ಇವರಿಬ್ಬರ ಮಧ್ಯೆ ಬ್ರೇಕ್ ಅಪ್ ಆಗಿದ್ದು, ಆಗ ಹರಿಹರ ಕೃಷ್ಣ ಆಕೆಗೆ ಪ್ರಪೋಸ್ ಮಾಡಿದ್ದಾನೆ.

ಇದಕ್ಕೆ ಸಮ್ಮತಿ ಸೂಚಿಸಿದ ಯುವತಿ ಹರಿಹರ ಕೃಷ್ಣನನ್ನು ಪ್ರೀತಿಸಲು ಆರಂಭಿಸಿದ್ದು, ಈಗಾಗಲೇ ಬ್ರೇಕ್ ಅಪ್ ಮಾಡಿಕೊಂಡಿದ್ದ ನವೀನ್ ಆ ಬಳಿಕವೂ ಆಕೆಯೊಂದಿಗೆ ಸಂಪರ್ಕದಲ್ಲಿರುವ ಜೊತೆಗೆ ಮೆಸೇಜ್ ಗಳನ್ನು ಕಳುಹಿಸುತ್ತಿದ್ದ. ಇದು ಹರಿಹರ ಕೃಷ್ಣನ ಆಕ್ರೋಶಕ್ಕೆ ಕಾರಣವಾಗಿತ್ತು. ಫೆಬ್ರವರಿ 17ರಂದು ಇವರಿಬ್ಬರ ನಡುವೆ ಇದೇ ವಿಷಯಕ್ಕೆ ಗಲಾಟೆ ನಡೆದಿದ್ದು, ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಇದೀಗ ಹರಿಹರ ಕೃಷ್ಣನನ್ನು ವಶಕ್ಕೆ ಪಡೆದಿರುವ ಪೊಲೀಸರು ನವೀನ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read