ದುಡ್ಡಿಗಾಗಿ ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ ಜೂನಿಯರ್ ಆರ್ಟಿಸ್ಟ್ ಅರೆಸ್ಟ್

ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದ ಸಿನಿಮಾ ಕಲಾವಿದೆಯನ್ನ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ ಕಮಿಷನರ್ ಕಾರ್ಯಪಡೆ, ಪಶ್ಚಿಮ ವಲಯದ ತಂಡವು ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದು ಮಗಳನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದ ಆರೋಪಿ ಜೂನಿಯರ್ ಕಲಾವಿದೆಯನ್ನು ಬಂಧಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಚಿತ್ರರಂಗದ 38ರ ಹರೆಯದ ಜೂನಿಯರ್ ಆರ್ಟಿಸ್ಟ್ ಪಿ.ಲಕ್ಷ್ಮಿ ಸಿನಿಮಾ ಪಾತ್ರಗಳಿಂದ ಬರುವ ಆದಾಯ ತನ್ನ ಖರ್ಚಿಗೆ ಸಾಕಾಗದ ಹಿನ್ನೆಲೆಯಲ್ಲಿ ಜುಬಿಲಿ ಹಿಲ್ಸ್ ನಲ್ಲಿರುವ ತನ್ನ ನಿವಾಸದಲ್ಲಿ ವೇಶ್ಯಾವಾಟಿಕೆ ದಂಧೆ ಆರಂಭಿಸಿದ್ದಳು.

ಹುಡುಗಿಯನ್ನು ಆಕೆಯ ಬಾಲ್ಯದಿಂದಲೂ ಆರೋಪಿ ಬೆಳೆಸಿದ್ದು ಈಕೆಯೇ ತನ್ನ ಸ್ವಂತ ತಾಯಿ ಎಂದು ಬಾಲಕಿ ನಂಬಿದ್ದಳು. ಆರೋಪಿ ಅಪ್ರಾಪ್ತ ಬಾಲಕಿಯನ್ನು ಕಳೆದ ಎರಡು ವರ್ಷಗಳಿಂದ ವೇಶ್ಯಾವಾಟಿಕೆ ನಡೆಸುವಂತೆ ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಆಕೆ ನಿರಾಕರಿಸಿದ ಮೇಲೆ ದೊಣ್ಣೆಯಿಂದ ಥಳಿಸಿ, ಚರ್ಮಕ್ಕೆ ಬಿಸಿ ರಾಡ್ ನಿಂದ ಸುಟ್ಟು ದೈಹಿಕ ಹಿಂಸೆ ನೀಡಿದ್ದಳು. ಬಾಲಕಿಯನ್ನು ಬಲವಂತವಾಗಿ ಶಾಲೆಯಿಂದ ಬಿಡಿಸಿ ಅವಳ ಕೂದಲನ್ನು ಕತ್ತರಿಸಿದ್ದಳು.

ಸುಳಿವಿನ ಮೇರೆಗೆ ಪೊಲೀಸ್ ಕಾರ್ಯಪಡೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಯ ನಿವಾಸದ ಮೇಲೆ ದಾಳಿ ನಡೆಸಿ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದೆ. ಆರೋಪಿ ಮತ್ತು ಆಕೆಯ ಸಹಚರರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read