‘ವಾಷಿಂಗ್ ಪೌಡರ್​ ನಿರ್ಮಾ’ ಜಾಹೀರಾತಿನ ಮೂಲಕ ತೆಲಂಗಾಣದಲ್ಲಿ ಅಮಿತ್​ ಷಾಗೆ ಬಿಆರ್‌ಎಸ್ ಸ್ವಾಗತ

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಗರಕ್ಕೆ ಭಾನುವಾರ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ‘ವಾಷಿಂಗ್ ಪೌಡರ್ ನಿರ್ಮಾ’ ಹೋರ್ಡಿಂಗ್ ಮೂಲಕ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕರು ವ್ಯಂಗ್ಯವಾಗಿ ಸ್ವಾಗತಿಸಿದ್ದಾರೆ.

ವಾಷಿಂಗ್ ಪೌಡರ್ ನಿರ್ಮಾ ಜಾಹೀರಾತಿನಲ್ಲಿನ ‘ನಿರ್ಮಾ ಗರ್ಲ್’ ಚಿತ್ರಗಳನ್ನು ತಿದ್ದಿ, ಅದಕ್ಕೆ ಬಿಜೆಪಿ ನಾಯಕರ ಮುಖಗಳನ್ನು ಸೇರಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಬೇರೆ ಪಕ್ಷಗಳಿಂದ ಬಂದು ಬಿಜೆಪಿ ಸೇರಿದವರು. ಹೋರ್ಡಿಂಗ್‌ ಕೆಳಗೆ ‘ವೆಲ್​ಕಮ್​ ಟು ಅಮಿತ್ ಷಾ’ ಎಂದು ಬರೆಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಹೈದರಾಬಾದ್‌ನ ಗೋಡೆಗಳಲ್ಲಿ ಶನಿವಾರ ವಿವಿಧ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಇದೀಗ ಈ ಹೋರ್ಡಿಂಗ್‌ನಲ್ಲಿ ಕರ್ನಾಟಕದ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಕೆಎಸ್ ಈಶ್ವರಪ್ಪ ಅವರ ಚಿತ್ರಗಳೂ ಇವೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮುಂದೆ ತೆಲಂಗಾಣ ಸಿಎಂ ಚಂದ್ರಶೇಖರ ರಾವ್‌ ಅವರ ಪುತ್ರಿ ಕೆ. ಕವಿತಾ ಅವರು ಶನಿವಾರ ಹಾಜರಾದ ಸಂದರ್ಭದಿಂದ ಹೈದರಾಬಾದ್‌ನ ಅನೇಕ ಕಡೆ ಬಿಜೆಪಿ ವಿರುದ್ಧ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಅದರ ಮುಂದುವರೆದಿರುವ ಭಾಗವಾಗಿ ಈಗ ಈ ರೀತಿ ವಿವಾದಾತ್ಮಕ ಪೋಸ್ಟರ್​ ಮೂಲಕ ಸ್ವಾಗತ ಕೋರಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read