ಪತಿಯ ಅದೃಷ್ಟ ಕಿತ್ತುಕೊಳ್ಳುತ್ತೆ ಪತ್ನಿಯ ಇಂಥಾ ಹವ್ಯಾಸ…..!

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಮಾತಿದೆ. ಬಾಲ್ಯದಲ್ಲಿ ತಾಯಿಯ ಮಾರ್ಗದರ್ಶನದಲ್ಲಿ ಬೆಳೆಯುವ ಹುಡುಗ ವಯಸ್ಸಿಗೆ ಬಂದ ಮೇಲೆ ಪತ್ನಿ ನೆರಳಾಗ್ತಾಳೆ.

ಹಿಂದೂ ಪುರಾಣದಲ್ಲಿ ಪತ್ನಿಯಾದವಳು ಹೇಗಿರಬೇಕೆನ್ನುವ ಬಗ್ಗೆ ವಿವರವಾಗಿ ಹೇಳಲಾಗಿದೆ.

ಪತ್ನಿಯ ನಡತೆ ಪತಿಯ ಯಶಸ್ಸು ಹಾಗೂ ವೈಫಲ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಪತ್ನಿಯಾದವಳು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು.

ಯಾವ ಮಹಿಳೆ ಬೆಳಿಗ್ಗೆ ಸೂರ್ಯೋದಯವಾದ ಮೇಲೂ ಮಲಗಿರುತ್ತಾಳೋ, ಪ್ರತಿ ದಿನ ಸ್ನಾನ ಮಾಡುವುದಿಲ್ಲವೋ ಆಕೆ ಪತಿಗೆ ಸದಾ ಅಭಾಗ್ಯ ಕಾಡುತ್ತದೆ.

ಕಠಿಣ ಮಾತುಗಳನ್ನಾಡುವ, ಬೇರೆಯವರನ್ನು ನೋಯಿಸುವ ಪತ್ನಿ, ಪತಿಯ ದುರಾದೃಷ್ಟವನ್ನು ಹೆಚ್ಚಿಸುತ್ತಾಳೆ.

ಸದಾ ಊಟ, ಆಹಾರ ಸೇವನೆಯಲ್ಲಿಯೇ ಇರುವ ಮಹಿಳೆ ಪತಿಗೂ ಅದೃಷ್ಟ ಒಲಿದು ಬರೋದಿಲ್ಲ. ಮಂದಗತಿಯಲ್ಲಿ ಜೀವನ ಸಾಗುತ್ತದೆ.

ಬೆಳಿಗ್ಗೆ ಬೇಗ ಹಾಸಿಗೆ ಬಿಟ್ಟು, ಮನೆಯನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ಪೂಜೆ ಮಾಡಿ, ಸದಾ ಮನೆಯವರ ಸುಖ ಬಯಸುವ, ಧರ್ಮದ ಮಾರ್ಗದಲ್ಲಿ ನಡೆಯುವ ಮಹಿಳೆಯ ಪತಿ ಸದಾ ಸುಖವಾಗಿರುತ್ತಾನೆ. ಅದೃಷ್ಟ ಆತನ ಕೈ ಹಿಡಿಯುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read